ಕಾರವಾರ: ‘ವಿವಾದ ಮುಂದುವರಿಸುವುದಕ್ಕಿಂತ ರಾಜಿ ಸಂಧಾನದಲ್ಲಿ ಪರಿಹರಿಸಿಕೊಳ್ಳುವುದು ಉತ್ತಮ ಮಾರ್ಗ. ಮಧ್ಯಸ್ಥಿಕೆಯಲ್ಲಿ ವ್ಯಕ್ತಿ ಮೇಲುಗೈ ಸಾಧಿಸುವುದಿಲ್ಲ. ಬದಲಾಗಿ ಪರಿಣಾಮಕಾರಿಯಾಗಿ, ವಿವಾದಗಳು ಬಗೆಹರಿಯಲಿವೆ. ಇದು ಸಾಮರಸ್ಯ ಮತ್ತು ಶಾಂತಿಯನ್ನು ಬೆಳೆಸುತ್ತದೆ’ ಎಂದು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು.

ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಕಟ್ಟಡದ ಆವರಣದಲ್ಲಿ ನಿರ್ಮಾಣಗೊಂಡಿರುವ ಭಾನುವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಚೇರಿಯ ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ನ್ಯಾಯದಾನ ತೀರ್ಪು ಪ್ರಕ್ರಿಯೆಯಲ್ಲಿ, ಒಬ್ಬ ವ್ಯಕ್ತಿ ಅಥವಾ ದಾವೆದಾರರು ಮೇಲುಗೈ ಸಾಧಿಸುತ್ತಾರೆ. ಕಾನೂನುಬದ್ಧವಾಗಿ ಒಬ್ಬರಿಗೆ ನ್ಯಾಯ ಸಿಕ್ಕರೂ ಇನ್ನೊಬ್ಬರು ಬೇಸರಗೊಳ್ಳಬಹುದು. ರಾಜಿ ಸಂಧಾನದಲ್ಲಿ ಪರಸ್ಪರ ಸಂಬಂಧವೂ ಉಳಿದುಕೊಳ್ಳುತ್ತದೆ’ ಎಂದರು.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷೆ, ನ್ಯಾಯಮೂರ್ತಿ ಅನು ಶಿವರಾಮನ್ ಮಾತನಾಡಿ, ‘ಕಾನೂನು ಸೇವೆಗಳ ಪ್ರಾಧಿಕಾರವು ನ್ಯಾಯವನ್ನು ನ್ಯಾಯಾಲಯದ ಕೋಣೆಗಳಿಗೆ ಸೀಮಿತವಾಗಿಸದೇ ಸಾಮಾನ್ಯ ನಾಗರಿಕರ ಬದುಕನ್ನು ತಲುಪಲು ಶ್ರಮಿಸುತ್ತಿದೆ’ ಎಂದರು.

ಉತ್ತರ ಕನ್ನಡ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂರ್ತಿ ಪ್ರದೀಪ ಸಿಂಗ್ ಯರೂರ್ ಮಾತನಾಡಿ, ‘ವಕೀಲರು, ಮಧ್ಯವರ್ತಿಗಳು, ನ್ಯಾಯಾಧೀಶರು ಒಟ್ಟಾಗಿ, ಪ್ರತಿಯೊಂದು ವಿವಾದದ ವಿಚಾರಣೆಯನ್ನು ದೀರ್ಘಕಾಲ ನಡೆಸಬಾರದು ಎಂಬ ಕಲ್ಪನೆಯನ್ನು ಸಾಮೂಹಿಕವಾಗಿ ಅಳವಡಿಸಿಕೊಳ್ಳಬೇಕು’ ಎಂದರು.

ಹೈಕೋರ್ಟ್ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಎಸ್.ಜಿ ಪಂಡಿತ್, ಪ್ರಭಾರ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಾಯಣ್ಣ ಬಿ.ಎಲ್, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಭಾಗ್ವತ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾದೀಶೆ ದಿವ್ಯಶ್ರೀ ಸಿ.ಎಂ, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ,
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಡಿಸಿಎಫ್ ಸಿ.ರವಿಶಂಕರ, ತರಬೇತಿ ನಿರತ ಐಎಎಸ್ ಅಧಿಕಾರಿ ಜೂಫಿಶಾನ್ ಹಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ, ಲೋಕೋಪಯೋಗಿ ಇಲಾಖೆಯ ಇಇ ಮಲ್ಲಿಕಾರ್ಜುನ ಎಚ್., ಇತರರು ಪಾಲ್ಗೊಂಡಿದ್ದರು.

ವ್ಯಾಜ್ಯ ಪರಿಹಾರಕ್ಕೆ ಮಾರ್ಗ

‘ಕಾನೂನು ಸೇವೆಗಳ ಪ್ರಾಧಿಕಾರದ ಪರ್ಯಾಯ ವಿವಾದ ಪರಿಹಾರ (ಎಡಿಆರ್) ಕಟ್ಟಡವು ಮಧ್ಯಸ್ಥಿಕೆ ಮೂಲಕ ವ್ಯಾಜ್ಯ ಪರಿಹಾರಕ್ಕೆ ವ್ಯವಸ್ಥೆ ಕಲ್ಪಿಸಲಿದೆ. ಸಮಾಲೋಚನೆ ಕೊಠಡಿ ರಾಜಿ ಸಭಾಂಗಣ ಕುಟುಂಬ ಮತ್ತು ವಾಣಿಜ್ಯ ವಿವಾದ ಪರಿಹಾರಕ್ಕಾಗಿ ಸ್ಥಳಾವಕಾಶವನ್ನು ಒಳಗೊಂಡಿರುವ ಈ ಸೌಲಭ್ಯ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವ ತಾಣವಾಗಲಿದೆ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹೇಳಿದರು. ‘ತರಬೇತಿ ಪಡೆದ ಮಧ್ಯವರ್ತಿಗಳು ಕಾನೂನು ನೆರವು ಸಲಹೆಗಾರರು ಮತ್ತು ನಿರ್ವಾಹಕರು ತಮ್ಮ ಕರ್ತವ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಲಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.