ಮುಂಡಗೋಡ: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಗಂಗಾಧರ ನಾಯ್ಕ ಬರೆದ, 'ಡೋಂಟ್ ಗಿವ್ ಅಪ್, ಮುಂದಕ್ಕೆ ಸಾಗೋಣ' ಕೃತಿಯನ್ನು ಭಾನುವಾರ ಗೂಗಲ್ ಮೀಟ್ ಮೂಲಕ ಬಿಡುಗಡೆ ಮಾಡಲಾಯಿತು.

ಶಿರಸಿ ಶೈಕ್ಷಣಿಕ ಜಿಲ್ಲೆಯ ಸಿರಿಕನ್ನಡ ನುಡಿ ಬಳಗ, ನೌಕರರ ಸಂಘದ ಕಲಾ, ಸಾಂಸ್ಕೃತಿಕ ಸಂಘದ ಸಹಯೋಗದಲ್ಲಿ 100ಕ್ಕೂ ಹೆಚ್ಚು ಶಿಕ್ಷಕರು, ಸಾಹಿತ್ಯಾಸಕ್ತರ ಹಾಜರಿಯಲ್ಲಿ ಶಿಕ್ಷಕ ನಾರಾಯಣ ಭಾಗವತ ಕೃತಿ ಬಿಡುಗಡೆಗೊಳಿಸಿದರು.

'ಕೊನೆಯ ಬೆಂಚಿನ ವಿದ್ಯಾರ್ಥಿಯಲ್ಲಿಯೂ ಆತ್ಮಸ್ಥೈರ್ಯ ತುಂಬುತ್ತ, ಸಾಧನೆಗೆ ಯಾವುದೂ ಅಡ್ಡಿಯಾಗಲಾರದು, ಆದರೆ, ನಕಾರಾತ್ಮಕ ಚಿಂತನೆಗಳಿಂದ ಹೊರಬರಬೇಕು ಎನ್ನುವ ಸಂದೇಶವನ್ನು ಗಂಗಾಧರ ನಾಯ್ಕ, ಚೊಚ್ಚಲ ಕೃತಿಯಲ್ಲಿ ಹೇಳಿದ್ದಾರೆ. ಖಂಡಿತವಾಗಿಯೂ ಇದು ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿದೆ' ಎಂದರು.

'ಕೋವಿಡ್ ಕಾರಣಕ್ಕೆ ಅಂತರ್ಜಾಲದ ಮೂಲಕ ಎಲ್ಲರೂ ಭೇಟಿಯಾಗಿದ್ದೇವೆ. ಪ್ರೌಢಶಾಲೆಯ ಹಂತಕ್ಕೆ ಬರುವ ವಿದ್ಯಾರ್ಥಿಗಳಲ್ಲಿ ಹಲವು ಗೊಂದಲಗಳಿರುತ್ತವೆ. ಸಾಮಾಜಿಕ ಹಿನ್ನೆಲೆಯೂ ಪ್ರಭಾವ ಬೀರುತ್ತದೆ. ಕೆಲವರು ಇವುಗಳನ್ನು ಎದುರಿಸಲಾಗದೇ, ಅರ್ಧಕ್ಕೆ ಶಾಲೆ ಬಿಡುತ್ತಾರೆ. ಅಂತಹವರನ್ನು ಗಮನದಲ್ಲಿಟ್ಟುಕೊಂಡು ಸಮಾಜದ 20 ಸಾಧಕರ ಕುರಿತು ಪ್ರೇರಣೆ ನೀಡುವಂತಹ ಲೇಖನ ಬರೆಯಲಾಗಿದೆ' ಎಂದು ಕೃತಿಕಾರ ಗಂಗಾಧರ ನಾಯ್ಕ ಹೇಳಿದರು.
ಕನ್ನಡ ಭಾಷಾ ಶಿಕ್ಷಕ ಸಿ.ಪಿ.ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ವಿಷ್ಣು ಪಟಗಾರ ಕೃತಿ ಪರಿಚಯಿಸಿದರು. ಫಕ್ಕೀರಪ್ಪ ಕಮದೋಡ, ಕಾಳಿದಾಸ ಬಡಿಗೇರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.