ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಕೋಲಾ: ಭತ್ತದ ಹುಲ್ಲು ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ, ಚಾಲಕನಿಗೆ ಗಾಯ

Last Updated 14 ಏಪ್ರಿಲ್ 2022, 7:31 IST
ಅಕ್ಷರ ಗಾತ್ರ

ಅಂಕೋಲಾ: ತಾಲ್ಲೂಕಿನ ತಳಗದ್ದೆಯ ರೈಲು ಸೇತುವೆಯ ಬಳಿ ಗುರುವಾರ ಮುಂಜಾನೆ, ಚಲಿಸುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ ವಾಹನ ಮತ್ತು ಅದರಲ್ಲಿ ಸಾಗಿಸುತ್ತಿದ್ದ ಒಣಹುಲ್ಲು ಸುಟ್ಟು ಕರಕಲಾಗಿದೆ. ವಾಹನ ಮಾಲೀಕ ಮತ್ತು ಚಾಲಕರಾಗಿದ್ದ ಶೇಖರ ಸುಕ್ರು ಗೌಡ ಅವರ ಕೈಗೆ ಬೆಂಕಿ ತಗುಲಿದ್ದು, ಗಾಯಗೊಂಡಿದ್ದಾರೆ.

ಬೊಲೆರೋ ಪಿಕಪ್ ವಾಹನದಲ್ಲಿ ಅಂಕೋಲಾದ ತಳಗದ್ದೆಯಿಂದ ಕುಮಟಾದ ಖಂಡಗಾರಕ್ಕೆ ಭತ್ತದ ಒಣಹುಲ್ಲು ಸಾಗಿಸಲಾಗುತ್ತಿತ್ತು. ಮಾರ್ಗಮಧ್ಯದಲ್ಲಿ ವಿದ್ಯುತ್ ತಂತಿ ಸ್ಪರ್ಶವಾಗಿ ಬೆಂಕಿ ಹೊತ್ತಿಕೊಂಡಿರುವ ಸಾಧ್ಯತೆಗಳಿದೆ. ಒಣಹುಲ್ಲಿಗೆ ಹೊತ್ತಿಕೊಂಡ ಬೆಂಕಿ ತ್ವರಿತವಾಗಿ ವಾಹನಕ್ಕೆ ಆವರಿಸಿಕೊಂಡಿದೆ. ವಾಹನದ ಮುಂಭಾಗದಲ್ಲಿ ಏಕಾಏಕಿ ಹೊತ್ತಿ ಉರಿದ ಬೆಂಕಿಯಿಂದ ಚಾಲಕನ ಕೈ ಸುಟ್ಟುಹೋಗಿದೆ. ವಾಹನ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ₹7,000 ಮೌಲ್ಯದ ಒಣಹುಲ್ಲು ಮತ್ತು ಲಕ್ಷಾಂತರ ಮೌಲ್ಯದ ವಾಹನ ಹಾನಿಗೊಂಡಿದೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ಉಮೇಶ ನಾಯ್ಕ, ಸಿಬ್ಬಂದಿ ಗಜಾನನ ದೇವಾಡಿಗ, ಹರ್ಷ ನಾಯ್ಕ, ಗಜೇಂದ್ರ ಬೊಬ್ರುಕರ್, ಚಂದ್ರಹಾಸ ಗೌಡ ಕಾರ್ಯಾಚರಣೆಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT