ಸಿದ್ದಾಪುರ: ‘ಒಂದು ದೇಶ ಬೆಳೆಯಬೇಕಾದರೆ ಮಾನವ ಸಂಪನ್ಮೂಲದ ಅವಶ್ಯಕತೆ ಇದೆ. ಯಾವುದೇ ದೇಶದ ದೊಡ್ಡ ಸಂಪನ್ಮೂಲ ಎಂದರೆ ಅದು ಮಾನವ ಸಂಪನ್ಮೂಲ. ಕೇವಲ ಹಣ ಮಾತ್ರ ಸಂಪನ್ಮೂಲ ಅಲ್ಲ’ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧಿಪತಿಗಳಾದ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಲಗಡಿಕೊಪ್ಪದಲ್ಲಿ ನಿರ್ಮಾಣವಾಗುವ ಕರೆ ಒಕ್ಕಲಿಗರ ಸಮುದಾಯ ಭವನದ ಶಂಕುಸ್ಥಾಪನೆ ಶುಕ್ರವಾರ ನೆರವೇರಿಸಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಹಣಕ್ಕಿಂತ ಮುಖ್ಯವಾಗಿ ಬೇಕಾಗಿರುವುದು ಶಿಕ್ಷಣ . ಮಕ್ಕಳಿಗೆ ಶಿಕ್ಷಣವನ್ನು ನೀಡುವ ಕೈಂಕರ್ಯವನ್ನು ನಾವು ಮಾಡುತ್ತಿದ್ದೇವೆ. ಮಕ್ಕಳಿಗೆ ಶಿಕ್ಷಣ ನೀಡಲು ಆಗದಿದ್ದರೆ ನಮ್ಮ ಮಠಕ್ಕೆ ಕಳುಹಿಸಿ. ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತದೆ. ಬಹುಕಾಲದಿಂದಲೂ ಎಲ್ಲರೂ ನಿರೀಕ್ಷೆ ಮಾಡುತ್ತಿದ್ದ ಸಿದ್ದಾಪುರ ಕರೆ ಒಕ್ಕಲಿಗರ ಸಂಘದ ಸಮುದಾಯ ಭವನದ ಭೂಮಿ ಪೂಜೆ ಕಾರ್ಯ ಇಂದು ಸಾಕಾರಗೊಂಡಿದ್ದು ಇದಕ್ಕೆ ಎಲ್ಲರ ಸಹಕಾರ ಅವಶ್ಯ’ ಎಂದರು.

ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಸಮಾಜವನ್ನು ಸರಿಯಾದ ರೀತಿಯಲ್ಲಿ ಮುನ್ನಡೆಸುವಾಗ, ಸಮಾಜವನ್ನು ಸದೃಢ ಮಾಡುವಾಗ ಗುರುಗಳ ಆದೇಶ, ಸಂದೇಶವನ್ನು ಚಾಚು ತಪ್ಪದೇ ನಡೆಸಬೇಕು. ಯಾವುದೇ ಕಾರ್ಯ ಆಗಬೇಕಾದರೆ ಸಂಘಟನೆಯೂ ಮುಖ್ಯ. ಅಲ್ಲದೇ ಆರ್ಥಿಕ ಕ್ರೋಢೀಕರಣ ಬೇಕಾಗುತ್ತದೆ. ಇಲ್ಲಿಯ ಸಮುದಾಯ ಭವನಕ್ಕೆ ಸರ್ಕಾರದಿಂದ ₹50ಲಕ್ಷ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ, ಕುಮಟಾ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹಾಗೂ ಶ್ರೀ ಸಾಯಿನಾಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿದ್ದರು.

ತಾಲ್ಲೂಕು ಕರೆ ಒಕ್ಕಲಿಗರ ಸಂಘದ ಅಧ್ಯಕ್ಷ ಸುಬ್ರಾಯ ಗೌಡ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಉಮಾಪತಿ ಗೌಡ, ಧರ್ಮೇಶ್ ಸಿರಿಬೈಲ್, ಉಪೇಂದ್ರ ಪೈ ಶಿರಸಿ, ಕೆ.ಟಿ.ಗೌಡ ಕಾರವಾರ, ಎಂ.ಟಿ.ಗೌಡ ಕುಮಟಾ, ಮಹಾಬಲೇಶ್ವರ ಗೌಡ ಮೇಲಿನ ಸರಕುಳಿ, ಶಂಕರ ಎಂ.ಗೌಡ, ವಿನಾಯಕ ಕೆ.ಆರ್, ವಸಂತ ನಾಯ್ಕ ಇತರರು ಉಪಸ್ಥಿತರಿದ್ದರು.

ಸ್ಥಳ ದಾನಿಗಳಾದ ವೆಂಕಟೇಶ ರಾಮದಾಸ ಕಾಂತು(ಕಾಂತು ಮಾಸ್ತರ್) ಅವರನ್ನು ಸನ್ಮಾನಿಸಲಾಯಿತು.

ಸಭಾ ಕಾರ್ಯಕ್ರಮಕ್ಕೂ ಮೊದಲು ಗುರುಗಳನ್ನು ಸಾಗರ ವೃತ್ತದಲ್ಲಿ ಕಾರು ಮತ್ತು ಬೈಕ್ ರ್ಯಾಲಿ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸಿ ಮೆರವಣಿಗೆ ಮೂಲಕ ಹಲಗಡಿಕೊಪ್ಪಕ್ಕೆ ಕರೆತರಲಾಯಿತು.

ಪ್ರದೀಪಕುಮಾರ ಸ್ವಾಗತಿಸಿದರು. ನಾಗಪತಿ ಗೌಡ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣು ಪಟಗಾರ, ಅನಿತಾ ಗೌಡ ನಿರ್ವಹಿಸಿದರು.

Highlights - ಗುರುಗಳ ಸಂದೇಶ ಚಾಚೂ ತಪ್ಪದೇ ಪಾಲನೆ ಮಾಡಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.