ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರದ ದಿಮ್ಮಿಗೆ ಬೆಂಕಿ: ₹2 ಲಕ್ಷ ನಷ್ಟ

Published 20 ಮಾರ್ಚ್ 2024, 15:58 IST
Last Updated 20 ಮಾರ್ಚ್ 2024, 15:58 IST
ಅಕ್ಷರ ಗಾತ್ರ

ಮುಂಡಗೋಡ: ಪಟ್ಟಣದ ಶಿರಸಿ ರಸ್ತೆಯ ಹಜರತ್‌ ಮೆಹಬೂಬಸಾಬ ಕಟ್ಟಿಗೆ ಮಿಲ್‌ ಆವರಣದಲ್ಲಿ ಸಂಗ್ರಹಿಸಿಟ್ಟಿದ್ದ ಮರದ ದಿಮ್ಮಿಗಳಿಗೆ ಬುಧವಾರ ಆಕಸ್ಮಿಕ ಬೆಂಕಿ ತಗುಲಿ ಸುಮಾರು ₹2 ಲಕ್ಷ ಮೌಲ್ಯದ ಕಟ್ಟಿಗೆ ಹಾನಿಯಾಗಿದೆ. ಬೆಲೆ ಬಾಳುವ ಕಟ್ಟಿಗೆ ಬೆಂಕಿಗಾಹುತಿಯಾಗಿದೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದರು.

ಮಂಗಳವಾರ ಪಟ್ಟಣದ ನೆಹರೂ ನಗರದ ಸ.ನಂ.131ರಲ್ಲಿ ಮಾವಿನ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿತ್ತು. ಅಕ್ಕಪಕ್ಕದ ಅಡಿಕೆ, ಬಾಳೆ ತೋಟ ಹಾಗೂ ಕಬ್ಬಿನ ತೋಟಕ್ಕೂ ಬೆಂಕಿ ವ್ಯಾಪಿಸುವ ಸಾಧ್ಯತೆಯಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದರು.

ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಮೋಹನ ಬುಜಂಗನವರ್, ಸಂತೋಷ ಪಾಟೀಲ, ಅಡಿವೆಪ್ಪ ಕುರುವಿನಕೊಪ್ಪ, ಮಹಾಬಲೇಶ್ವರ ಶಿವನಗುಡಿ, ಹರೀಶ ಪಟಗಾರ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT