ಅಂಕೋಲಾ: ಕಾರವಾರದಿಂದ ಹೊನ್ನಾವರದ ಕಡೆಗೆ ಪಶು ಔಷಧಿ ಸಾಗಿಸುತ್ತಿದ್ದ ಟಾಟಾ ಏಸ್ ವಾಹನದಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಪಟ್ಟಣದಲ್ಲಿ ಬುಧವಾರ ನಡೆದಿದೆ.
ಚಾಲಕ ರಸ್ತೆ ಬದಿಯಲ್ಲಿ ವಾಹನ ನಿಲುಗಡೆ ಮಾಡಿ ಊಟಕ್ಕೆ ತೆರಳಿದ್ದ ವೇಳೆ ವಾಹನದಿಂದ ಹೊಗೆ ಬರುವದನ್ನು ನೋಡಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದರು.
ಸಾವಿರಾರು ಮೌಲ್ಯದ ಔಷಧಗಳನ್ನು ಪಶು ಆಸ್ಪತ್ರೆಗೆ ಪೂರೈಸಲು ಸಾಗಿಸಲಾಗುತ್ತಿತ್ತು. ಅವಘಡದಲ್ಲಿ ಕೆಲವು ಪ್ರಮಾಣದ ಔಷಧಿಗಳಿಗೆ ಮಾತ್ರ ಹಾನಿ ಉಂಟಾಗಿದ್ದು ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದರಿಂದ ದೊಡ್ಡ ಪ್ರಮಾಣದ ಆನಿ ತಪ್ಪಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.