ದಾಂಡೇಲಿ:ಕರ್ನಾಟಕ ವಿದ್ಯುತ್ ನಿಗಮದ ಅಂಬಿಕಾನಗರದ ಪವರ್ ಹೌಸ್ ಬಳಿಯ ವಿದ್ಯುತ್ ಗ್ರಿಡ್‍ನ ಇನ್ಸುಲೇಟರ್‌ನಲ್ಲಿ ಸೋಮವಾರ ಭಾರಿ ಸ್ಫೋಟದೊಂದಿಗೆ ಅಗ್ನಿ ಅವಘಡ ಸಂಭವಿಸಿತು. ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿತು.

ನಿಗಮದ ಪವರ್ ಹೌಸ್‍ಗೆಸಮೀಪದಲ್ಲಿರುವವಿದ್ಯುತ್ ಗ್ರಿಡ್‌ನಲ್ಲಿ ಈ ಅವಘಡವಾಗಿದ್ದು, ಸಿ.ಸಿ.ಟಿ.ವಿ ಕ್ಯಾಮೆರಾದ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇನ್ಸುಲೇಟರ್‌ನಲ್ಲಿ ಇದ್ದಕ್ಕಿದ್ದಂತೆ ಸ್ಫೋಟಗೊಂಡ ರೀತಿಯಲ್ಲಿ ಶಬ್ದವಾಗಿ ಬೆಂಕಿ ಹೊತ್ತಿಕೊಂಡಿತು.ಇದರಿಂದಹತ್ತಿರದಲ್ಲಿದ್ದ ನಿಗಮದ ಸಿಬ್ಬಂದಿ ಭಯಭೀತರಾದರು. ಸ್ವಲ್ಪ ಹೊತ್ತಿನ ಬಳಿಕ ಬೆಂಕಿ ನಿಯಂತ್ರಣಕ್ಕೆ ಬಂತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಘಟನೆಯಿಂದ ವಿದ್ಯುತ್ ನಿಗಮಕ್ಕೆಲಕ್ಷಾಂತರ ರೂಪಾಯಿಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಈ ಬಗ್ಗೆ ಮಾಹಿತಿ ಪಡೆಯಲು ನಿಗಮದ ಅಧಿಕಾರಿಗಳು ಲಭ್ಯರಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.