‘ಆ.3 ರಂದು ಟೆಲಿಗ್ರಾಮ್ ಆ್ಯಪ್‍ನಲ್ಲಿ ಬಂದಿದ್ದ ಜಾಹಿರಾತು ಗಮನಿಸಿ ಸುಪರ್ ವಿಐಪಿ ಟ್ರೇಡಿಂಗ್ ಗ್ರುಪ್ ಎಂಬ ವಾಟ್ಸಾಪ್ ಗುಂಪಿಗೆ ಸೇರಿಕೊಂಡಿದ್ದೆ. ಆನ್‍ಲೈನ್ ಹೂಡಿಕೆ ಮಾಡಿ ಹೆಚ್ಚು ಲಾಭ ಗಳಿಸಿಕೊಡುವುದಾಗಿ ಗುಂಪಿನ ಮುಖ್ಯಸ್ಥರು ನಂಬಿಸಿ ಹಂತ ಹಂತವಾಗಿ ₹70 ಲಕ್ಷ ಹೂಡಿಕೆ ಮಾಡಿಸಿದ್ದರು. ಸೆ.16 ರಂದು ಹೂಡಿಕೆ ಮಾಡಿದ್ದ ಹಣ ಹಿಂಪಡೆಯಲು ಪ್ರಯತ್ನಿಸಿದಾಗ ತೆರಿಗೆ ಪಾವತಿಸಬೇಕು ಎಂದು ಪೀಡಿಸಿದ್ದರು. ನಂತರ ಗುಂಪಿನಿಂದ ಹೊರತೆಗೆದು ನಂಬರ್ ಕೂಡ ಬ್ಲಾಕ್ ಮಾಡಿದ್ದಾರೆ. ಈವರೆಗೂ ಹಣ ನೀಡಿಲ್ಲ’ ಎಂದು ವ್ಯಾಪಾರಿ ಸಿ.ಇ.ಎನ್ ಠಾಣೆಗೆ ದೂರು ನೀಡಿದ್ದಾರೆ.