ಜೊಯಿಡಾ: ಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಕ್ರೂಗರ್ ಫೌಂಡೇಷನ್ ಕಾರವಾರ ಹಾಗೂ ಏಕಲ್ ಅಭಿಯಾನ ಸಹಯೋಗದಲ್ಲಿ ಶುಕ್ರವಾರ ಆವೇಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಆವೇಡಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರುಣ ಭಗವತಿರಾಜ್ ಕಾರ್ಯಕ್ರಮ ಉದ್ಘಾಟಿಸಿದರು, ಸಂಜೀವಿನಿ ಸೇವಾ ಟ್ರಸ್ಟ್ ಸಂಸ್ಥಾಪಕ ರವಿ ರೇಡ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಬೆಳಗಾವಿ ಏಕಲ್ ಅಭಿಯಾನದ ಡಾ.ವೈಶಾಲಿ ಕಿತ್ತೂರ, ಸ್ತ್ರೀ ರೋಗ ತಜ್ಞೆ ಡಾ.ಮೀನಾ ಕಾಮತ್, ಕಣ್ಣಿನ ತಜ್ಞ ಡಾ.ಶ್ರೇಯಸ್, ಡಾ.ವಸಂತ ಬಾಳಿಗಾ, ಡಾ.ಗಣೇಶ ವಿರಕ್ತಿಮಠ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಿದರು.

ಸಂಸ್ಥೆಯ ಜಯಂತ ಗಾವಡಾ, ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀ ರಂಗಯ್ಯ ಮುರಾರಿ, ರೇಣುಕಾ ಸಿದ್ಧಿ, ಮಹಮ್ಮದ್ ಗೌಸ , ಸಮುದಾಯ ಆರೋಗ್ಯ ಅಧಿಕಾರಿ ಬಾಲಕೃಷ್ಣ,ಶಾಲಾ ಶಿಕ್ಷಕಿ ಉಷಾ ಜೋಶಿ ಮುಂತಾದವರು ಇದ್ದರು.

ಶಿಬಿರದಲ್ಲಿ ಆವೇಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಹಳ್ಳಿಗಳ ಸುಮಾರು 120 ಜನರ ಆರೋಗ್ಯ ತಪಾಸಣೆ ಮಾಡಲಾಯಿತು.