ಶಿರಸಿ: ತುಂತುರು ಮಳೆ, ಕಡಿಮೆ ಉಷ್ಣಾಂಶ ಮತ್ತು ಅಧಿಕ ತೇವಾಂಶದಂಥ ವಾತಾವರಣದ ಕಾರಣ ಶುಂಠಿ ಬೆಳೆಯಲ್ಲಿ ಎಲೆಚುಕ್ಕಿ ರೋಗ ವ್ಯಾಪಿಸುತ್ತಿದ್ದು, ಸೋಮವಾರ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡ ಶುಂಠಿ ಕ್ಷೇತ್ರಕ್ಕೆ ಭೇಟಿ ನೀಡಿ ಪರಿಶೀಲಿಸಿತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿ ಹೋಬಳಿ ಮತ್ತು ಮುಂಡಗೋಡ ಪ್ರದೇಶದ ವ್ಯಾಪ್ತಿಯಲ್ಲಿ ಶುಂಠಿಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುತ್ತಿದ್ದು, ಈ ಸಾಲಿನಲ್ಲಿ ಎಲೆಚುಕ್ಕಿ ರೋಗ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಈ ಕಾರಣ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ವಿಜ್ಞಾನಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ತಂಡ ಬನವಾಸಿ ಭಾಗದ ತಿಗಣಿ, ಅಜ್ಜರಣಿ, ಗುಡ್ನಾಪುರ ಮತ್ತು ನವಣಗೇರಿ ಗ್ರಾಮಗಳ ಶುಂಠಿ ಪ್ರದೇಶಕ್ಕೆ ಭೇಟಿಕೊಟ್ಟು ಪರಿಶೀಲಿಸಿತು.

ಕೊಲೆಟೊಟ್ರೈಕಮ್, ಪಿಲ್ಲೊಸ್ಟಿಕ್ಟಾ ಮತ್ತು ಫೈರಿಕ್ಯುಲೇರಿಯಾ ರೋಗಾಣುಗಳು ಕಂಡುಬಂದಿದ್ದು, ಈ ರೋಗವು ಗಾಳಿಯಲ್ಲಿ ವೇಗವಾಗಿ ಹರಡುವುದರಿಂದ ಸಮಗ್ರ ರೋಗ ನಿರ್ವಹಣೆಯನ್ನು ಕೈಗೊಳ್ಳಲು ರೈತರಿಗೆ ತಿಳಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.