ಗೋಕರ್ಣ: ಗೋಕರ್ಣದ ಶಾಲಾ, ಕಾಲೇಜುಗಳು, ಬ್ಯಾಂಕಗಳು, ಸಹಕಾರ ಸಂಸ್ಥೆಗಳು, ಇತರೆ ಸಂಘ ಸಂಸ್ಥೆಗಳು ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಯಿಂದ ಇಲ್ಲಿಯ ರಥಬೀದಿಯ ಸುಭಾಷ್ ಚೌಕದಲ್ಲಿ ಸ್ವಾತಂತ್ರ್ಯೋತ್ಸವವನ್ನು ಶುಕ್ರವಾರ ವಿಜೃಂಭಣೆಯಿಂದ ಆಚರಿಸಲಾಯಿತು.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮನಾ ಗೌಡ ರಥಬೀದಿಯ ಸುಭಾಷ್ ಚೌಕದಲ್ಲಿ ಸಾರ್ವಜನಿಕವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕ್ಷೇತ್ರದ ಸ್ವಚ್ಛತೆ, ಸಂಪೂರ್ಣ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದೇವೆ. ಇದಕ್ಕೆ ಎಲ್ಲರ ಸಲಹೆ ಸಹಕಾರ ಮುಖ್ಯ ಎಂದರು.

ಪೊಲೀಸ್ ನಿರೀಕ್ಷಕ ಶ್ರೀಧರ ಎಸ್.ಆರ್, ಉಪನಿರೀಕ್ಷಕ ಖಾದರ ಭಾಷಾ ಇದ್ದರು.

ಸಮೀಪದ ಬಂಕಿಕೋಡ್ಲದ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಗಂಗಾಧರ ಭಟ್ ಧ್ವಜಾರೋಹಣ ನೆರವೇರಿಸಿದರು.

ಗೋಕರ್ಣದ ಭದ್ರಕಾಳಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಎಸ್.ಸಿ. ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಅರ್ಬನ್ ಬ್ಯಾಂಕನಲ್ಲಿ ಬ್ಯಾಂಕ್ ಅಧ್ಯಕ್ಷ ಮೋಹನ ನಾಯಕ ಧ್ವಜಾರೋಹಣ ನೆರವೇರಿಸಿದರು.

ಹೆಸ್ಕಾಂ ಗೋಕರ್ಣ ಶಾಖೆಯಲ್ಲಿ ಚೌಡಗೇರಿಯ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕ, ಶಿಕ್ಷಕಿಯರು ಮತ್ತು ಹೆಸ್ಕಾ ನೌಕರರಿಂದ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಹೆಸ್ಕಾಂ ಶಾಖಾಧಿಕಾರಿ ಗೋಪಿನಾಥ ರೆಡ್ಡಿ ಧ್ವಜಾರೋಹಣ ನೆರವೇರಿಸಿದರು. ಅನಿಲ್ ಲಂಬಾಣಿ, ವಿಘ್ನೇಶ ನಾಯ್ಕ, ವೆಂಕಟೇಶ್ ಟಿ.ಗೌಡ, 24x7 ಸಿಬ್ಬಂದಿ ವಿನಾಯಕ ನಾಯ್ಕ, ನಾಗರಾಜ್ ಗೌಡ, ರವಿ ನಾಯ್ಕ, ಅಮಿತ್ ನಾಯ್ಕ, ಮಂಜುನಾಥ್ ಗೌಡ, ಚಂದ್ರು ಗೌಡ ಇದ್ದರು.

ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿ ಜಗದೀಶ ನಾಯ್ಕ ಧ್ವಜಾರೋಹಣ ನೆರವೇರಿಸಿದರು. ಸ್ಥಳೀಯ ನಾಗರಬೈಲ ಉಪ್ಪಿನ ಮಾಲಿಕರ ಸಹಕಾರ ಸಂಘ ನಿ. ಸಾಣಿಕಟ್ಟಾದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ನಡೆಯಿತು.

ಇಲ್ಲಿಯ ಹರಿಹರೇಶ್ವರ ವೇದ ಪಾಠಶಾಲೆಯಲ್ಲಿ ಪ್ರಾಚಾರ್ಯ ಉದಯ ಗಣಪತಿ ಮಯ್ಯರ್ ಧ್ವಜಾರೋಹಣ ನೆರವೇರಿಸಿದರು.

ಮೇಧಾ ದಕ್ಷಿಣಮೂರ್ತಿ ಸಂಸ್ಕೃತ ಮಹಾವಿದ್ಯಾಲಯದ ಮತ್ತು ಶ್ರೀಕ್ಷೇತ್ರ ಬ್ರಾಹ್ಮಣ ಪರಿಷತ್ ನಲ್ಲಿಯೂ ಧ್ವಜಾರೋಹಣ ನೆರವೇರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.