ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾರ್ಶವಾಯು ಪೀಡಿತರಿಗೆ ಪಿಜಿಯೋಥೆರಪಿ ವರದಾನ: ಸವಿತಾ ಕಾಮತ್

Published 21 ಫೆಬ್ರುವರಿ 2024, 14:03 IST
Last Updated 21 ಫೆಬ್ರುವರಿ 2024, 14:03 IST
ಅಕ್ಷರ ಗಾತ್ರ

ಭಟ್ಕಳ: ವೈಟಲ್ ಅಲೈನ್ ಪಿಜಿಯೋಥೆರೆಪಿ ಸಂಸ್ಥೆಯಿಂದ ಭಟ್ಕಳದ ರೋಗಿಗಳಿಗೆ ವರದಾನವಾಗಿದೆ ಎಂದು ಭಟ್ಕಳ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಸವಿತಾ ಕಾಮತ್ ಹೇಳಿದರು.

 ಪಟ್ಟಣದ ಸಾಗರ ರಸ್ತೆಯ ಗುರುಸುಧೀಂದ್ರ ಕಾಲೇಜಿನ ಸಮೀಪದ ವೈಟಲ್ ಅಲೈನ್ ಪಿಜಿಯೋಥೆರಪಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಪಘಾತ, ಪಾರ್ಶ್ವವಾಯು ಪೀಡಿತರು, ಶಸ್ತ್ರಚಿಕಿತ್ಸೆಯ ನಂತರ ಫಿಜಿಯೋಥೆರಫಿ ಅಗತ್ಯವಾಗಿದ್ದು ಇದರಿಂದ ಬಹಳಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.

ಪಿಜಿಯೋಥೆರಪಿ ಕೇಂದ್ರದಿಂದ ಭಟ್ಕಳದಲ್ಲಿರುವವರು ಬೇರೆ ಬೇರೆ ಕಡೆಗಳಿಗೆ ಹೋಗುವುದು ತಪ್ಪಿದಂತಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಯ ವೈದ್ಯ ಲಕ್ಷ್ಮಿಷ ನಾಯ್ಕ ಮಾತನಾಡಿ, ಅಪಘಾತ ಮುಂತಾದ ಕಾರಣಗಳಿಂದ ತಮ್ಮ ಅಂಗಾಗಳ ಚಲನೆಯನ್ನು ಕಳೆದುಕೊಂಡು ತೊಂದರೆಗೆ ಒಳಗಾಗಿರುವವರಿಗೆ ಇದು ವರದಾನವಾಗಿದೆ. ಪಿಜಿಯೋಥೆರಪಿ ಚಿಕಿತ್ಸೆಯಿಂದ ಶೇ 100ರಷ್ಟು ಮರು ಚಲನೆಯನ್ನು ಪಡೆಯುವುದಕ್ಕೆ ಸಾಧ್ಯ ಎಂದು ತಮ್ಮನ್ನೇ ಉದಾಹರಿಸಿದ ಅವರು ಇದರ ಸದುಪಯೋಗ ಅಗತ್ಯವಿದ್ದವರು ಪಡೆದುಕೊಳ್ಳಲಿ ಎಂದು ಹಾರೈಸಿದರು.

ಭಾಸ್ಕರ ನಾಯ್ಕ ಕಾಯ್ಕಿಣಿ, ಸಮಾಜ ಸೇವಕ ನರೇಂದ್ರ ನಾಯಕ, ಪತ್ರಕರ್ತ ರಾಧಾಕೃಷ್ಣ ಭಟ್ಟ, ಸಮಾಜ ಸೇವಕ ನಜೀರ್ ಕಾಶೀಂಜಿ, ವೈಟಲ್ ಅಲೈನ್ ಪಿಜಿಯೋಥೆರಪಿ ಕೇಂದ್ರದ ವೈದ್ಯೆ ಡಾ. ಧನ್ಯಾ ಪ್ರಭು ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT