ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳಿಯಾಳ: ಮಳೆಗೆ ಒದ್ದೆಯಾದ ಗೋವಿನ ಜೋಳ

Published : 24 ಸೆಪ್ಟೆಂಬರ್ 2024, 13:40 IST
Last Updated : 24 ಸೆಪ್ಟೆಂಬರ್ 2024, 13:40 IST
ಫಾಲೋ ಮಾಡಿ
Comments

ಹಳಿಯಾಳ: ಪಟ್ಟಣದಲ್ಲಿ ಭಾನುವಾರ ಸಂಜೆ ಸುರಿದ ರಭಸದ ಮಳೆಯಿಂದ ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದ ಗೋವಿನ ಜೋಳಕ್ಕೆ ಹಾನಿಯಾಗಿದೆ.

ಕಳೆದ ವಾರವಷ್ಟೇ ಕೊಯ್ಲು ಮಾಡಿ ಮಾರಾಟಕ್ಕಾಗಿ ಎಪಿಎಂಸಿ ಪ್ರಾಂಗಣದಲ್ಲಿ ಶೇಖರಣೆ ಮಾಡಲಾಗಿತ್ತು. ಸೋಮವಾರ ಎಪಿಎಂಸಿ ಪ್ರಾಂಗಣದಲ್ಲಿ ರೈತರು ಗೋವಿನ ಜೋಳವನ್ನು ಅಲ್ಲಲ್ಲಿ ಒಣ ಹಾಕುತ್ತಿರುವುದು ಕಂಡುಬಂತು.

ತಾಲ್ಲೂಕಿನ 3,500 ಹೆಕ್ಟೇರ್ ಗೋವಿನ ಜೋಳದ ಪೈಕಿ ಕಳೆದ ತಿಂಗಳಿನಲ್ಲಿ ಸುಮಾರು 216 ಹೆಕ್ಟೇರ್ ಬೆಳೆಗೆ ಗಾಳಿ ಮಳೆಯಿಂದ ಹಾನಿಯಾಗಿದೆ.

‘ವ್ಯಾಪಾರಿಗಳು ಕಡಿಮೆ ದರಕ್ಕೆ ಫಸಲು ಕೇಳುತ್ತಾರೆ. ಈಗ ಮಳೆಯಿಂದಾಗಿ ಕಾಳು ಒದ್ದೆಯಾಗಿ ಮೊಳಕೆ ಒಡೆದು ಕೊಳೆಯುವ ಸಾಧ್ಯತೆಯೂ ಇದೆ’ ಎಂದು ಹವಗಿ ಗ್ರಾಮದ ಮಾರುತಿ ರಾಮಾ ಬೆಳಗಾಂಕರ ಹಾಗೂ ಬಾಣಸಗೇರಿ ಗ್ರಾಮದ ಮಂಜುನಾಥ ಪಕೀರ ಮಿರಾಶಿ ಆತಂಕ ವ್ಯಕ್ತಪಡಿಸಿದರು.

‘ಕಷ್ಟಪಟ್ಟು ಮೂರು ನಾಲ್ಕು ತಿಂಗಳಿನಿಂದ ಬೆಳೆದ ಬೆಳೆ ಕೈ ಸೇರಿತ್ತು. ಈಗ ಮಳೆ ಬಂದು ಮತ್ತೆ ಸಮಸ್ಯೆ ಎದುರಾಗಿದೆ’ ಬಾಣಸಗೇರಿ ಗ್ರಾಮದ ನಿಂಗಪ್ಪಾ ಹೂವಪ್ಪ ಚಾಪಗಾಂವಕರ ಹಾಗೂ ಸುರೇಖಾ ನಿಂಗಪ್ಪಾ ಚಾಪಗಾಂವಕರ ಹೇಳಿದರು.

‘ರೈತರು ಮಳೆ ಸೂಚನೆ ನೋಡಿ ಗೋವಿನ ಜೋಳವನ್ನು ಕಟಾವು ಮಾಡಬೇಕು. ಯಾವುದೇ ಕಾರಣಕ್ಕೂ ಗಡಿಬಿಡಿ ಬೇಡ’ ಎಂದು ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ ಹೇಳಿದರು.

ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದ ಗೋವಿನ ಜೋಳ ಮಳೆಯಿಂದಾಗಿ ಒದ್ದೆಯಾಗಿದೆ
ಹಳಿಯಾಳದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪ್ರಾಂಗಣದಲ್ಲಿ ಮಾರಾಟಕ್ಕೆ ತಂದ ಗೋವಿನ ಜೋಳ ಮಳೆಯಿಂದಾಗಿ ಒದ್ದೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT