ಅಭಿವೃದ್ಧಿಗೆ ಅಡ್ಡಗಾಲಿಡುವ ಯತ್ನ
‘ಪಹಲ್ಗಾಮ್ ದಾಳಿ ಕೇವಲ ಭಾರತೀಯರನ್ನು ಬೆದರಿಸುವ ಯತ್ನವಲ್ಲ. ದೇಶದ ಅಭಿವೃದ್ಧಿಗೆ ಅಡ್ಡಗಾಲಿಡಲು ಶತ್ರುರಾಷ್ಟ್ರಗಳು ನಡೆಸಿದ ಕುಕೃತ್ಯ. ಇವುಗಳಿಗೆ ದೇಶ ಎಂದಿಗೂ ಹೆದರುವುದಿಲ್ಲ’ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಹೇಳಿದರು. ‘ಉರಿ ಪುಲ್ವಾಮಾ ದಾಳಿಯ ಬಳಿಕ ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿದಾಗ ಕಾಂಗ್ರೆಸ್ ನಾಯಕರು ಸಾಕ್ಷ್ಯ ಕೇಳಿದ್ದರು. ಈ ಬಾರಿಯೂ ಅಂತಹದ್ದೇ ಮಾತುಗಳನ್ನಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ’ ಎಂದೂ ವ್ಯಂಗ್ಯವಾಡಿದರು.