ಭಾನುವಾರ, ಏಪ್ರಿಲ್ 2, 2023
24 °C
ಉತ್ಸವ ಆಯೋಜಕ ಎನ್.ದತ್ತಾ ಮಾಹಿತಿ

ಫೆ.2 ರಿಂದ ಕರುನಾಡು ಕರಾವಳಿ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾರವಾರ: ‘ಟ್ಯಾಗೋರ್ ಕಡಲತೀರದಲ್ಲಿ ಫೆ.2 ರಿಂದ 6ರ ವರೆಗೆ ಕರುನಾಡು ಕರಾವಳಿ ಉತ್ಸವ ನಡೆಯಲಿದ್ದು, ಸ್ಥಳೀಯ ಪ್ರತಿಭೆಗಳ ಜತೆಗೆ ರಾಷ್ಟ್ರಮಟ್ಟದ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಲಿದ್ದಾರೆ’ ಎಂದು ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ ತಿಳಿಸಿದರು.

ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಫೆ.2 ರಂದು ಸಂಜೆ ಉದ್ಘಾಟನೆ ನಡೆಯಲಿದೆ. ಅಂದು ಸಂಜೆ 6 ಗಂಟೆಯಿಂದ ಸ್ಥಳೀಯ ಕಲಾವಿದರಿಂದ ನೃತ್ಯ, ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಟಿವಿ ರಿಯಾಲಿಟಿ ಶೋಗಳಲ್ಲಿ ಪಾಲ್ಗೊಂಡಿದ್ದ ಕಲಾವಿದರಿಂದ ಗಾಯನ ನಡೆಯಲಿದೆ. 3 ರಂದು ರಿದಮ್ ಹಾರ್ಟ್ ಬೀಟ್ ಸಂಸ್ಥೆಯ ನೃತ್ಯ ಪ್ರದರ್ಶನ, ದೀಪೇಶ್ ನಾಯ್ಕರಿಂದ ಸಂಗೀತ, ಚಿತ್ರಕಲೆ ಪ್ರದರ್ಶನ ನಡೆಯಲಿದೆ. ರಾತ್ರಿ ರಚಿತ್ ಅಗರವಾಲ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ’ ಎಂದು ತಿಳಿಸಿದರು.

‘ಫೆ.4 ರಂದು ರಾತ್ರಿ ರ‍್ಯಾಪರ್ ಗಾಯಕ ಅಲೋಕ್ ಬಾಬು ತಂಡದಿಂದ ಗಾಯನ ನಡೆಯಲಿದೆ. ಅಂದು ಮಧ್ಯಾಹ್ನ ದಿನೇಶ್ ಹೊಳ್ಳ ನೇತೃತ್ವದಲ್ಲಿ ಕಡಲತೀರದಲ್ಲಿ ಗಾಳಿಪಟ ಸ್ಪರ್ಧೆ ನಡೆಯಲಿದೆ. 5 ರಂದು ಸಂಜೆ ಕಾಂತಾರ ಚಲನಚಿತ್ರದ ಹಾಸ್ಯ ಕಲಾವಿದರಿಂದ ಕಚಗುಳಿ ಕಾಮಿಡಿ ಶೋ, ರಾತ್ರಿ ಮೋಹಿತ್ ಚೋಪ್ರಾ ತಂಡದಿಂದ ಸಂಗೀತ ರಸಮಂಜರಿ ನಡೆಯಲಿದೆ. 6 ರಂದು ಗೋವಾ ರಾಕರ್ ಬ್ಯಾಂಡ್ ಕಾರ್ಯಕ್ರಮದೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ’ ಎಂದು ತಿಳಿಸಿದರು.

ಪ್ರಮುಖರಾದ ದೀಪಕ ಕುಡಾಳಕರ್, ಮದನ ಗುನಗಿ, ಪೂನಮ್ ವಿಜಯೇಂದ್ರ, ರತ್ನಾಕರ ನಾಯ್ಕ, ಅನಿಲ ನಾಯ್ಕ, ವೈಭವ ವೆರ್ಣೇಕರ್, ಸುನೀಲ ನಾಯ್ಕ, ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.