ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ | ಕಸ್ತೂರಿ ರಂಗನ್ ವರದಿ ತಿರಸ್ಕಾರಕ್ಕೆ ಆಗ್ರಹ

Published 19 ನವೆಂಬರ್ 2023, 14:11 IST
Last Updated 19 ನವೆಂಬರ್ 2023, 14:11 IST
ಅಕ್ಷರ ಗಾತ್ರ

ಯಲ್ಲಾಪುರ: ‘ಸೆಟ್‌ಲೈಟ್ ಚಿತ್ರಣ ಆಧಾರಿತ ಕಸ್ತೂರಿ ರಂಗನ್ ವರದಿಯ ಕರಡು ಪ್ರತಿಯಲ್ಲಿ ಗುರುತಿಸಿದ ಅತೀ ಸೂಕ್ಷ್ಮ ಪರಿಸರ ಪ್ರದೇಶವು ಅವೈಜ್ಞಾನಿಕವಾಗಿದ್ದು ಈ ವರದಿಯನ್ನು ತಿರಸ್ಕರಿಸಬೇಕು’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

 ಪಟ್ಟಣದ ವೆಂಕಟ್ರಮಣ ದೇವಸ್ಥಾನದಲ್ಲಿ ಭಾನುವಾರ  ನಡೆದ ಕಸ್ತೂರಿ ರಂಗನ್ ವಿರೋಧಿ ಜಾಥಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ʻವರದಿ ತಯಾರಿಸುವಾಗ ಜನಾಭಿಪ್ರಾಯ ಅಥವಾ ಭೌತಿಕ ಸರ್ವೆ ಮಾಡಿ ವಿಷಯ ಸಂಗ್ರಹಿಸಿಲ್ಲ. ಪಶ್ಚಿಮಘಟ್ಟ ಪ್ರದೇಶದ ರಕ್ಷಣೆಗೆ ಈಗಾಗಗಲೇ ಕಾನೂನು ಅಸ್ತಿತ್ವದಲ್ಲಿದೆ. ಹೊಸಮಾನದಂಡದ ಅವಶ್ಯಕತೆ ಇಲ್ಲ’ ಎಂದರು.

ಪ್ರಮುಖರಾದ ಭೀಮ್ಸಿ ವಾಲ್ಮೀಕಿ, ಮಹಾಬಲೇಶ್ವರ ಭಟ್ಟ, ನಾಗರಾಜ ಮರಾಠಿ ಆನಗೋಡ, ನೂರ್‌ ಅಮ್ಮದ್ ಮದನೂರು, ಸುಬ್ರಾಯ ಭಟ್, ನರಸಿಂಹ ನಾಯ್ಕ ಕುಂದರಗಿ, ಸೀತಾರಾಮ ನಾಯ್ಕ ಕುಂದರಗಿ ಸೇರಿದಂತೆ ಅನೇಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT