ಶಿರಸಿ: ಕೆನರಾ ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ ಆಪರೇಟಿವ್ (ಕೆಡಿಸಿಸಿ) ಬ್ಯಾಂಕ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ನೇತೃತ್ವದ ಬಣ ಮುನ್ನಡೆ ಸಾಧಿಸಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಶಿವರಾಮ ಹೆಬ್ಬಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬಣಗಳ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು.

ಶಾಸಕ ಹಾಗೂ ಸಚಿವರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಕೆಡಿಸಿಸಿ ಬ್ಯಾಂಕ್ ಆಡಳಿತ ಸಮಿತಿಗೆ ಶನಿವಾರ ನಡೆದ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆ ತೀವ್ರ ಕುತೂಹಲ ಕೆರಳಿಸಿತ್ತು. 16 ಕ್ಷೇತ್ರಗಳಲ್ಲಿ ಕೇವಲ 7 ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಪ್ರಕಟಗೊಂಡಿದೆ. ಉಳಿದ ಕ್ಷೇತ್ರಗಳ ಫಲಿತಾಂಶ ಕೋರ್ಟ್ ಅಂಗಳದಲ್ಲಿದ್ದರೂ ಹಾಲಿ ಅಧ್ಯಕ್ಷ, ಶಾಸಕ ಶಿವರಾಮ ಹೆಬ್ಬಾರ ಬಣ ಸ್ಪಷ್ಟ ಬಹುಮತ ಸಾಧಿಸಿದೆ ಎನ್ನಬಹುದಾಗಿದೆ.

16 ಸ್ಥಾನದಲ್ಲಿ 3 ಸ್ಥಾನಗಳು ಈಗಾಗಲೇ ಅವಿರೋಧವಾಗಿದ್ದರೆ, ನಾಲ್ಕು ಕ್ಷೇತ್ರಗಳ ಫಲಿತಾಂಶವನ್ನು ಚುನಾವಣಾ ಅಧಿಕಾರಿ ಕಾವ್ಯಾರಾಣಿ ಪ್ರಕಟಿಸಿದರು. ಪ್ರಕಟಗೊಂಡ ಫಲಿತಾಂಶಗಳ ಪ್ರಕಾರ ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ ಬಣದಿಂದ ಕುಮಟಾದಲ್ಲಿ ರಾಜಗೋಪಾಲ ಅಡಿ (9) ಮತಗಳನ್ನು ಪಡೆದು ಗೆಲುವು ಸಾಧಿಸಿದರು.

ಇವರಿಗೆ ಗಜಾನನ ಪೈ ಸಹಕಾರ ನೀಡಿದ್ದರು. ಇದೇ ಕ್ಷೇತ್ರದಲ್ಲಿ ವೈದ್ಯ ಬಣದ ಶ್ರೀಧರ ಭಾಗ್ವತ (6) ಮತಗಳನ್ನು ಪಡೆದು ಸೋಲುಂಡರು. ಹಳಿಯಾಳದಲ್ಲಿ ಎಸ್.ಎಲ್.ಘೋಟ್ನೇಕರ್ (9) ಮತಗಳನ್ನು ಪಡೆದು ವಿಜೇತರಾದರೆ, ಪ್ರತಿಸ್ಪರ್ಧಿ ಸುಭಾಸ ಕೊರ್ವೇಕರ್ (4) ಮತ ಪಡೆದರು. ಜೋಯಿಡಾದಿಂದ ಕೃಷ್ಣ ದೇಸಾಯಿ (5) ಮತ ಪಡೆದು ಗೆದ್ದಲ್ಲಿ, ಪುರುಷೋತ್ತಮ ಕಾಮತ್ (4) ಮತ ಪಡೆದು ಸೋಲು ಕಂಡರು. ಮುಂಡಗೋಡದಿಂದ ಎಚ್.ಎಂ.ನಾಯ್ಕ (8) ಮತ ಪಡೆದಲ್ಲಿ, ಎಲ್.ಟಿ.ಪಾಟೀಲ (5) ಮತ ಪಡೆದು ಪರಾಭವಗೊಂಡರು. ಈ ಮಧ್ಯೆ ಅವಿರೋಧವಾಗಿದ್ದ ಭಟ್ಕಳದ ಕೃಷಿ ಪತ್ತಿನ ಸಂಘದ ಕ್ಷೇತ್ರದಿಂದ ಸಚಿವ ಮಂಕಾಳ ವೈದ್ಯ, ಹೊನ್ನಾವರದಿಂದ ವಿ.ಕೆ.ವಿಶಾಲ, ಅಂಕೋಲಾದಿಂದ ಬಾಬು ಗುನಗಿ ಆಯ್ಕೆಯನ್ನೂ ಚುನಾವಣಾಧಿಕಾರಿಗಳು ಪ್ರಕಟಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಹೆಬ್ಬಾರ ಬಣದಿಂದ ಕಾರವಾರದಿಂದ ಪ್ರಕಾಶ ಗುನಗಿ, ಯಲ್ಲಾಪುರದಿಂದ ಶಿವರಾಮ ಹೆಬ್ಬಾರ, ಮಾರ್ಕೆಟಿಂಗ್ನಿಂದ ಶಿರಸಿ ಟಿಎಂಎಸ್ ರವಿ ಹೆಗಡೆ ಹುಳಗೋಳ ಹಾಗೂ ಮಂಕಾಳ ವೈದ್ಯ ಬಣದಿಂದ ಔದ್ಯೋಗಿಕ ಕ್ಷೇತ್ರದಿಂದ ವಿಶ್ವನಾಥ ಭಟ್ ಕರ್ವ ಮುಂಚೂಣಿಯಲ್ಲಿದ್ದು, ಕೋರ್ಟ್ ಆದೇಶದ ಬಳಿಕವೂ ಸಹ ಇವರೆಲ್ಲರ ಗೆಲುವು ಖಚಿತವಾಗಿದೆ. ಹೆಬ್ಬಾರ ಬಣದಿಂದ ಮೂವರು ಮುಂಚೂಣಿಯಲ್ಲಿದ್ದರೆ, ವೈದ್ಯ ಬಣದಿಂದ ಒಬ್ಬರು ಮುನ್ನಡೆ ಸಾಧಿಸಿದ್ದಾರೆ.

ಹಣದ ಗೆಲುವು ಬಹುತೇಕ ಖಚಿತವಾಗುತ್ತಿದ್ದಂತೆ ಬ್ಯಾಂಕ್ ಎದುರು ಹೆಬ್ಬಾರ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಹೆಬ್ಬಾರ ಅವರು ಮಾತನಾಡಿ, ‘ಈಗಾಗಲೇ ಸ್ಪಷ್ಟ ಬಹುಮತ ನಮ್ಮ ತಂಡಕ್ಕೆ ಬಂದಿದೆ. ನಮ್ಮವರೇ ಅಧ್ಯಕ್ಷರಾಗಲಿದ್ದಾರೆ. ಇಲ್ಲಿ ಯಾರ ಸೊಕ್ಕು, ಅಧಿಕಾರ ನಡೆಯುವುದಿಲ್ಲ. ಜಿಲ್ಲೆಯ ಸಹಕಾರಿಗಳು ನ್ಯಾಯದ ಪರವಾಗಿದ್ದಾರೆ. ಗೆದ್ದ ನಂತರ ಯಾರನ್ನೂ ವಿರೋಧಿ ಎಂದು ಭಾವಿಸದೇ ಬ್ಯಾಂಕಿನ ಅಭಿವೃದ್ಧಿಯೇ ನಮ್ಮ ಗುರಿ ಎಂದು ಮುನ್ನಡೆಯಲಾಗುವುದು' ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.