ಕಾರವಾರ: ‘ಕೇಣಿ ಸರ್ವಋತು ಆಳಸಮುದ್ರ ಗ್ರೀನ್ಫೀಲ್ಡ್ ಬಂದರು ಯೋಜನೆ ಅಭಿವೃದ್ಧಿ ದೃಷ್ಟಿಯಿಂದ ಅಗತ್ಯವಿದೆ. ಯೋಜನೆ ವಿರೋಧಿಸಿದರೆ ಕಂಪನಿಯು ನೆರೆ ರಾಜ್ಯದಲ್ಲಿ ಯೋಜನೆ ಜಾರಿಗೆ ಮುಂದಾಗುವ ಆತಂಕವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.

‘ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ರಾಜ್ಯದ ಮೊದಲ ಬಂದರು ಇದು. ಸಮುದ್ರದಲ್ಲೇ ಬಂದರು ನಿರ್ಮಾಣ ಆಗಲಿದೆ. ಮೀನುಗಾರದಾಗಲಿ, ರೈತರದಾಗಲಿ ಜಾಗ ಸ್ವಾಧೀನಪಡಿಸಿಕೊಳ್ಳುತ್ತಿಲ್ಲ. ಅವರಿಗೆ ತೊಂದರೆ ಮಾಡದೆ ಯೋಜನೆ ಜಾರಿಗೆ ತರಲು ಸೂಚಿಸಲಾಗಿದೆ. ರಸ್ತೆ, ರೈಲ್ವೆ ಸಂಪರ್ಕಕ್ಕೆ ಅಲ್ಪ ಪ್ರಮಾಣದಲ್ಲಿ ಭೂಸ್ವಾಧೀನವಾಗಬಹುದು’ ಎಂದು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಮೀನುಗಾರರು, ರೈತರಿಗೆ ತೊಂದರೆಯಾಗದಂತೆ ಯೋಜನೆ ಕಾರ್ಯಗತಗೊಳಿಸಲು ಸೂಚನೆ ನೀಡಲಾಗಿದೆ. ಅನ್ಯ ರಾಜ್ಯಗಳಲ್ಲಿ ಖಾಸಗಿ ಸಹಭಾಗಿತ್ವದಡಿಯಲ್ಲಿ ಕೈಗೊಂಡ ಯೋಜನೆಗಳ ಬಗ್ಗೆಯೂ ಪರಿಶೀಲಿಸಿ, ನಂತರ ಕ್ರಮಕ್ಕೆ ಮುಂದಾಗಲಾಗುವುದು. ಯೋಜನೆ ಜಾರಿಯ ಬಳಿಕ ಉದ್ಯೋಗಾವಕಾಶದಲ್ಲಿ ಮೀನುಗಾರರಿಗೆ ಆದ್ಯತೆ ನೀಡಲು ಸೂಚಿಸಿದ್ದೇನೆ. ಕಂಪನಿಯವರು ಒಪ್ಪಿದ್ದಾರೆ. ಒಂದು ವೇಳೆ ಜನರಿಗೆ ಯೋಜನೆಯಿಂದ ತೊಂದರೆಯಾದರೆ ವಿರೋಧ ಮಾಡುತ್ತೇನೆ’ ಎಂದರು.

‘ಅಂಕೋಲಾದಲ್ಲಿ ವಿಮಾನ ನಿಲ್ದಾಣ ಯೋಜನೆ ಭೂಸ್ವಾಧೀನಕ್ಕೆ ಶೇ 50ರಷ್ಟು ಹಣ ಬಿಡುಗಡೆಯಾಗಿದೆ. ಉಳಿದ ಮೊತ್ತ ಬಿಡುಗಡೆಯಾದ ತಕ್ಷಣವೇ ಸ್ವಾಧೀನ ಪ್ರಕ್ರಿಯೆ ಆರಂಭಿಸಲಾಗುತ್ತದೆ’ ಎಂದರು.

‘ಶರಾವತಿ ಪಂಪ್ಡ್ ಸ್ಟೊರೇಜ್ ಯೋಜನೆಗೆ ವಿರೋಧವಿದೆ. ಜಿಲ್ಲೆಯ ಪರಿಸರಕ್ಕೆ ಧಕ್ಕೆ ತರುವ ಯಾವುದೇ ಯೋಜನೆ ಜಾರಿಗೆ ಬೇಡ ಎಂದು ಅಭಿಪ್ರಾಯ ಹೇಳಿದ್ದೇನೆ. ಅಣು ಸ್ಥಾವರ, ಜಲವಿದ್ಯುತ್ ಯೋಜನೆಗೆ ಜಾಗ ಸ್ವಾಧೀನವಾಗಿದೆ. ಸಿಆರ್.ಝಡ್ ನಿಯಮಾವಳಿಯಿಂದ ಕರಾವಳಿಯಲ್ಲಿ ತೊಂದರೆ ಆಗಿದೆ. ಹೀಗಾಗಿ ಹೊಸ ಯೋಜನೆ ಬೇಡ ಎಂದು ಹೇಳಿದ್ದೇನೆ’ ಎಂದರು.

‘ಖಾಸಗಿ ಜಮೀನುಗಳಲ್ಲಿ ಚಿರೇಕಲ್ಲು ಗಣಿಗಾರಿಕೆ ನಡೆಸಲು ಅನುಮತಿ ನೀಡುವಂತೆ ಸರ್ಕಾರದಮಟ್ಟದಲ್ಲಿ ಚರ್ಚಿಸಲಾಗಿದೆ. ಜಿಲ್ಲೆಯಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸಿ ತೆಗೆಯಲಾದ ಮರಳನ್ನು ಗೋವಾ ರಾಜ್ಯಕ್ಕೆ ಸಾಗಿಸುತ್ತಿರುವ ದೂರು ಹೆಚ್ಚಿದ್ದು, ಅವುಗಳ ನಿಯಂತ್ರಣಕ್ಕೆ ಅಧಿಕಾರಿಗಳಿಗೆ ಸೂಚಿಸಲಾಗುವುದು’ ಎಂದರು.

ಯುದ್ಧವಿಮಾನ ವಸ್ತುಸಂಗ್ರಹಾಲಯ ವೀಕ್ಷಣೆ ‘ಟುಪಲೇವ್ ಯುದ್ದ ವಿಮಾನ ವಸ್ತು ಸಂಗ್ರಹಾಲಯವು ಜಿಲ್ಲೆಯ ಪ್ರವಾಸಿ ಆಕರ್ಷಣೀಯ ತಾಣವಾಗಲಿದ್ದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರನ್ನು ಸೆಳೆಯಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಟ್ಯಾಗೋರ್ ಕಡಲತೀರದಲ್ಲಿ ಸ್ಥಾಪನೆಯಾಗಿರುವ ಟುಪಲೇವ್ ಯುದ್ಧವಿಮಾನ ವಸ್ತುಸಂಗ್ರಹಾಲಯವನ್ನು ಉದ್ಘಾಟಿಸಿ ವೀಕ್ಷಣೆ ನಡೆಸಿದ ಬಳಿಕ ಅವರು ಮಾತನಾಡಿದರು. ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಜಿಲ್ಲಾ ಪಂಚಾಯಿತಿ ಸಿಇಒ ಡಾ.ದೀಲಿಷ್ ಶಶಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕಿ ಮಂಗಳ ಗೌರಿ ಭಟ್ ಡಿಸಿಎಫ್ ಮಂಜುನಾಥ ನಾವಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.