ಶಿರಸಿ: 'ರಾಜಕೀಯ ಪ್ರಭಾವ ಗಟ್ಟಿಕೊಳಿಸಿಕೊಳ್ಳಲು ಮೀಸಲಾತಿ ಹಂಚಿಕೆ ಮಾಡುವ ಬದಲು ಸಂಪೂರ್ಣ ಮೀಸಲಾತಿ ರದ್ದುಪಡಿಸಲು ರಾಜ್ಯ ಸರ್ಕಾರ ಮುಂದಾಗಬೇಕು' ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹಿಸಿದರು.

'ಒಕ್ಕಲಿಗರು, ಪಂಚಮಸಾಲಿಗಳು, ಹೀಗೆ ಹತ್ತು ಹಲವು ಸಮುದಾಯಗಳು ಜನಸಂಖ್ಯಾ ಬಲ ಪ್ರದರ್ಶಿಸಿ ಮೀಸಲಾತಿಗೆ ಬೇಡಿಕೆ ಇಡುತ್ತಿವೆ. ಸರ್ಕಾರ ಮತಬ್ಯಾಂಕ್ ದೃಷ್ಟಿಯಿಂದ ಮೀಸಲಾತಿ ನೀಡುತ್ತಿದ್ದರೆ ಮೀಸಲಾತಿಯ ನಿಜ ಅರ್ಥ ಕಳೆದುಹೋಗುತ್ತದೆ' ಎಂದು ಮಂಗಳವಾರ ನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಪ್ರಬಲ ಸಮುದಾಯಗಳ ಒತ್ತಡಕ್ಕೆ ಮಣಿಯುತ್ತಿದ್ದರೆ ಸಣ್ಣ ಸಮುದಾಯಗಳು ಸಂವಿಧಾನಬದ್ಧ ಹಕ್ಕುಗಳಿಂದ ವಂಚಿತವಾಗುವ ಸಾಧ್ಯತೆ ಇದೆ. ಸರ್ಕಾರಕ್ಕೂ ಮೀಸಲಾತಿ ಹಂಚಿಕೆಗೆ ಸ್ಪಷ್ಟ ಮಾನದಂಡ ಇದ್ದಂತಿಲ್ಲ. ಹೀಗಾಗಿ ರಾಜಕೀಯ ಪ್ರಭಾವ ಬೀರುವ ಮತ್ತು ಜಾತಿಗಳ ನಡುವೆ ಸಂಘರ್ಷ ಹುಟ್ಟಿಸುವ ಮೀಸಲಾತಿಯನ್ನೇ ರದ್ದುಪಡಿಸುವುದು ಉತ್ತಮ' ಎಂದು ಅಭಿಪ್ರಾಯಪಟ್ಟರು.

'ದಕ್ಷಿಣ ಆಫ್ರಿಕಾ ಮಾದರಿಯಲ್ಲಿ ಶೇ.100ರಷ್ಟು ಮೀಸಲಾತಿಯನ್ನೇ ನಿಗದಿಪಡಿಸಬೇಕು. ಜಾತಿ, ಧರ್ಮದ ಬದಲು ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಅವಕಾಶ ಒದಗಿಸಲಿ. ಈ ಸಂಬಂಧ ಸಂವಿಧಾನ ತಿದ್ದುಪಡಿ ಮಾಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಲಿ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.