ಜೊಯಿಡಾ ತಾಲ್ಲೂಕಿನ ದೋಣಪಾದಲ್ಲಿ ಸದಾಶಿವಗಡ-ಔರಾದ್ ರಾಜ್ಯ ಹೆದ್ದಾರಿಯ ಅಂಚಿನಲ್ಲಿ ಕುಸಿತ ತಡೆಗೆ ತಡೆಗೋಡೆ ನಿರ್ಮಿಸುವ ಕೆಲಸ ಪ್ರಗತಿಯಲ್ಲಿದೆ.
ಕುಮಟಾ ತಾಲ್ಲೂಕಿನ ಖೈರೆ ಬಳಿ ಕಾರವಾರ–ಶಿರಸಿ ಹೆದ್ದಾರಿಯ ಅಂಚಿನಲ್ಲಿ ಕುಸಿತ ಸಂಭವಿಸಿರುವುದು.
ಕಳೆದ ವರ್ಷ ಗುಡ್ಡ ಕುಸಿದಿದ್ದ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ರಸ್ತೆ ಪಕ್ಕ ಕಾಂಕ್ರೀಟ್ ತಡೆಗೋಡೆ ಅಳವಡಿಸಿದ್ದರ ಹೊರತಾಗಿ ಯಾವುದೇ ಕ್ರಮವಾಗಿಲ್ಲ.

ಭೂಕುಸಿತವಾಗಬಹುದಾದ ಸ್ಥಳದಲ್ಲಿ ಸ್ಪಾಟರ್ಸ್‌ಗಳನ್ನು ನಿಯೋಜಿಸಲಾಗಿದ್ದು ಅವಘಡದ ಮಾಹಿತಿ ತಕ್ಷಣ ಪಡೆದು ಜೀವಹಾನಿ ಆಗದಂತೆ ಎಚ್ಚರವಹಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಕೆ.ಲಕ್ಷ್ಮಿಪ್ರಿಯಾ ಜಿಲ್ಲಾಧಿಕಾರಿ
ಕಳೆದ 3 ವರ್ಷದಿಂದ ಬೀಗಾರ- ಬಾಗಿನಕಟ್ಟಾ ರಸ್ತೆಯಲ್ಲಿ ಭೂ ಕುಸಿತ ಸಂಭವಿಸುತ್ತಿದೆ. ಇಲ್ಲಿ ತಡೆಗೋಡೆ ನಿರ್ಮಿಸಿ ಭೂ ಕುಸಿತದ ಅಪಾಯ ತಪ್ಪಿಸಬೇಕು
ಗಣೇಶ ಕಿರಗಾರಿ ಬೀಗಾರ ಗ್ರಾಮಸ್ಥ
ಜೊಯಿಡಾದ ದೋಣಪಾದಲ್ಲಿ ಸೇತುವೆ ಒಂದು ಬದಿಯಲ್ಲಿ ಮಣ್ಣು ಕುಸಿಯುತ್ತಿದೆ ಸೇತುವೆಗೆ ಹಾನಿಯಾದರೆ ಸಂಚಾರಕ್ಕೆ ತೀವ್ರ ಸಮಸ್ಯೆ ಎದುರಿಸಬೇಕಾಗುತ್ತದೆ
ಚಂದ್ರಕಾಂತ ದೇಸಾಯಿ ಕುಂಬಾರವಾಡಾ ಗ್ರಾಮಸ್ಥ
ಮೂಡಂಗಿಯ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ಬಿದ್ದ ಬಂಡೆ ಮಣ್ಣುಗಳನ್ನು ಇನ್ನೂ ತೆರವುಗೊಳಿಸಲಾಗಿಲ್ಲ. ಮಕ್ಕಳನ್ನು ಮತ್ತೆ ಅಲ್ಲಿಗೇ ಕಳಿಸಲು ಆತಂಕವಾಗುತ್ತಿದೆ
ಕಮಲಾಕ್ಷಿ ಮೂಡಂಗಿ ಮೂಡಂಗಿ ಗ್ರಾಮಸ್ಥೆ