ಶಿರಸಿ: ಜನ್ಮದಿನಕ್ಕೆ ಶುಭಾಶಯ ತಿಳಿಸಿದ್ದ ತಾಲ್ಲೂಕಿನ ಮಂಜುಗುಣಿಯ ನಾಗೇಂದ್ರ ಶೇಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯಿಸಿದ್ದಾರೆ.

ನರೇಂದ್ರ ಮೋದಿ ಅವರ 69ನೇ ಜನ್ಮದಿನಕ್ಕೆ ಶುಭಾಶಯ ಕೋರಿ, ಯುವಕ ನಾಗೇಂದ್ರ ಪತ್ರ ಬರೆದಿದ್ದರು. ಎರಡು ತಿಂಗಳ ಬಳಿಕ ನಾಗೇಂದ್ರ ಅವರಿಗೆ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದೆ. ‘ನೀವು ಕಳುಹಿಸಿರುವ ಜನ್ಮದಿನದ ಶುಭಾಶಯವನ್ನು ನಾನು ಸ್ವೀಕರಿಸಿದ್ದೇನೆ. ರಾಷ್ಟ್ರ ಸೇವೆ ಮಾಡಲು ನೂರು ಕೋಟಿ ಭಾರತೀಯರ ಪ್ರೀತಿ, ವಾತ್ಸಲ್ಯ ನನಗೆ ಪ್ರೇರಣೆಯಾಗಿದೆ. ನಿಮ್ಮ ಶುಭಾಶಯ ನನಗೆ ಬಹಳ ಸಂತೋಷ ತಂದಿದೆ. ನಿಮಗೆ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಂಜುಗುಣಿ ವೆಂಕಟರಮಣ ದೇವಾಲಯದ ಮುಖ್ಯ ವ್ಯವಸ್ಥಾಪಕರಾಗಿರುವ ನಾಗೇಂದ್ರ ಅವರು ಸೆಪ್ಟೆಂಬರ್ 17ರಂದು ಪತ್ರ ಬರೆದಿದ್ದರು. ಅದರ ಜೊತೆಗೆ ದೇವರ ಪ್ರಸಾದವನ್ನಿಟ್ಟು, ಮಂಜುಗುಣಿಗೆ ಭೇಟಿ ನೀಡುವಂತೆ ಆಹ್ವಾನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.