ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿಯಾಳ | ಕಷ್ಟದಲ್ಲೂ ಮಿಡಿದ ಸವಿತಾ ಸಮಾಜ; ಸಮುದಾಯದ ಹಲವರಿಗೆ ಸಹಾಯಹಸ್ತ

ಲಾಕ್‌ಡೌನ್‌ನಿಂದ ವ್ಯವಹಾರಕ್ಕೆ ಆಸ್ಪದವಿಲ್ಲ
Last Updated 23 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಹಳಿಯಾಳ: ಕೊರೊನಾ ವೈರಸ್ ಸೋಂಕು ತಡೆಯಲು ಲಾಕ್‌ಡೌನ್‌ಅವಧಿಯಲ್ಲಿ ಸೆಲೂನ್‌ಗಳು ತೆರೆಯದ ಕಾರಣಸವಿತಾ ಸಮಾಜದ ಸದಸ್ಯರ ಬದುಕು ಸಂಕಷ್ಟಕ್ಕೀಡಾಗಿದೆ.ಸರ್ಕಾರವು ಕೂಡಲೇಸ್ಪಂದಿಸಿಶಾಶ್ವತವಾಗಿಆರ್ಥಿಕ ಸಹಾಯ ಆಗುವಂಥ ಯೋಜನೆರೂಪಿಸಬೇಕು ಎಂದು ಪ್ರಮುಖರು ಒತ್ತಾಯಿಸಿದ್ದಾರೆ.

ಲಾಕ್‌ಡೌನ್ ಆದೇಶದ ಬೆನ್ನಲ್ಲೇಸವಿತಾಸಮಾಜದವರು ತಮ್ಮ ತಮ್ಮ ಅಂಗಡಿಗಳ ಬಾಗಿಲು ಮುಚ್ಚಿದರು. ಆದರೆ, ತಮಗಿಂತಲೂ ಕಷ್ಟದಲ್ಲಿರುವ ಸಮಾಜದ ಬಂಧುಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಸೆಲೂನ್‌ಗಳ ಮಾಲೀಕರುಒಟ್ಟಾಗಿಹಣವನ್ನು ಒಗ್ಗೂಡಿಸಿ ಬಡ ಕ್ಷೌರಿಕರ ಕುಟುಂಬಗಳಿಗೆ ಅಗತ್ಯವುಳ್ಳ ಆಹಾರ ಧಾನ್ಯ ಮತ್ತಿತರ ದಿನಸಿಗಳನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಜನರ ಸ್ವಾಸ್ಥ್ಯ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಮಾ.22ರಿಂದಲೇ ಸೆಲೂನ್‌ಗಳ ಬಾಗಿಲು ಮುಚ್ಚಲಾಗಿದೆ. ಈ ಸಂಬಂಧ ಅಂಗಡಿಗಳ ಮುಂದೆ ಪ್ರಕಟಣೆಯನ್ನೂ ಅಂಟಿಸಲಾಗಿದೆ.ಪಟ್ಟಣದಲ್ಲಿ ಸುಮಾರು 40 ಹಾಗೂ ಗ್ರಾಮೀಣ ಭಾಗದಲ್ಲಿ 35ಕ್ಕೂ ಹೆಚ್ಚು ಸೆಲೂನ್‌ಗಳಿವೆ.ಸುಮಾರು 300ರಷ್ಟು ಮಂದಿ ಹಾಗೂ ಅವರ ಕುಟುಂಬಗಳ ಸಾವಿರಾರು ಮಂದಿಇದೇ ವೃತ್ತಿಯನ್ನು ನಂಬಿಕೊಂಡಿದ್ದಾರೆ.

ಇವರ ಜೊತೆಗೆ ಸ್ಥಳೀಯ ಶಾಸಕ ಆರ್.ವಿ.ದೇಶಪಾಂಡೆ, ವಿ.ಆರ್.ಡಿ.ಎಂ.ಟ್ರಸ್ಟ್, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಮಾಜಿ ಶಾಸಕ ಸುನೀಲ ಹೆಗಡೆ ಸಹ ಅಗತ್ಯ ದಿನಸಿ ವಸ್ತುಗಳನ್ನು ಪೂರೈಸಿದ್ದಾರೆ.

ಲಾಕ್‌ಡೌನ್ ಆದೇಶ ಮೀರಿಯಾರಾದರೂ ಕದ್ದುಮುಚ್ಚಿ ಕ್ಷೌರವನ್ನು ಮಾಡಿದರೆಅಂತಹವರ ಮೇಲೆ ಸಮಾಜದಿಂದಲೇ ಪೊಲೀಸರಿಗೆ ದೂರು ನೀಡಲಾಗುತ್ತಿದೆ. ಸಂಬಂಧಪಟ್ಟ ಇಲಾಖೆಗಳ ಗಮನಕ್ಕೂ ತಂದುದಂಡ ವಿಧಿಸಲಾಗುತ್ತಿದೆ.

‘ಇಂದಿನ ದಿನಗಳಲ್ಲಿ ಗ್ರಾಹಕರಿಗೆ ಉತ್ತಮ ಸೌಲಭ್ಯ ನೀಡುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿದ್ದೇವೆ. ಇದಕ್ಕಾಗಿ ಸಾಲ ಮಾಡಿದವರೂ ಇದ್ದಾರೆ. ಹಾಗಾಗಿತಿಂಗಳ ಸಾಲದ ಕಂತುಗಳ ಮರುಪಾವತಿ ಹಾಗೂ ದಿನನಿತ್ಯದ ಜೀವನ ಕಷ್ಟವಾಗಿದೆ’ ಎನ್ನುತ್ತಾರೆ ಸವಿತಾ ಕ್ಷೌರಿಕ ಸಮಾಜದ ನಗರ ಘಟಕದ ಅಧ್ಯಕ್ಷ ನಾರಾಯಣ ತಿಮ್ಮಣ್ಣ ಮಕ್ತಲ.

ಲಾಕ್‌ಡೌನ್ ಆದಾಗಿನಿಂದ ಕ್ಷೌರಿಕರಿಗೆ ದುಡಿಮೆಯೇ ಇಲ್ಲದಂತಾಗಿ ಕುಟುಂಬದ ಸದಸ್ಯರು ಬಹಳಷ್ಟು ಕಷ್ಟದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಬೇಕು ಎನ್ನುವುದು ಹಿರಿಯ ನಾಗರಿಕಮಾರುತಿ ಸಾಳುಂಕೆ ಒತ್ತಾಯವಾಗಿದೆ.

ಪಟ್ಟಣದ ಬ್ಯೂಟಿ ಪಾರ್ಲರ್‌ಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಇದೂ ಹಲವರ ಆದಾಯಕ್ಕೆ ತೊಂದರೆಯುಂಟು ಮಾಡಿದೆ.

‘ಪುರಸಭೆಯಿಂದ ಪರವಾನಗಿ’:‘ಮನೆ ಮನೆಗೆ ತೆರಳಿ ಕ್ಷೌರ ಮಾಡಲು ಪರವಾನಗಿಯನ್ನು ಪುರಸಭೆಯಿಂದ ನೀಡಲಾಗುವುದು. ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು, ಕೈಗವಸು ಬಳಕೆ ಮಾಡಬೇಕು. ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗುಲೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT