ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಅಂಗವಿಕಲರು, ವೃದ್ಧರಿಗೆ ಅಂಚೆ ಮತಪತ್ರ ಅವಕಾಶ’

Published 20 ಮಾರ್ಚ್ 2024, 15:57 IST
Last Updated 20 ಮಾರ್ಚ್ 2024, 15:57 IST
ಅಕ್ಷರ ಗಾತ್ರ

ಹಳಿಯಾಳ: ‘ಲೋಕಸಭಾ ಸಾರ್ವತ್ರಿಕ ಚುನಾವಣೆ ಉತ್ತಮ ರೀತಿಯಲ್ಲಿ ನಡೆಯುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ತಾಲ್ಲೂಕಿನಲ್ಲಿ 103, ದಾಂಡೇಲಿಯಲ್ಲಿ 54, ಜೋಯಿಡಾದಲ್ಲಿ 58 ಮತಗಟ್ಟೆಗಳು ಸೇರಿದಂತೆ ಒಟ್ಟು 215 ಮತಗಟ್ಟೆಗಳಿವೆ’ ಎಂದು ಸಹಾಯಕ ಚುನಾವಣಾಧಿಕಾರಿ ಸ್ಟೆಲ್ಲಾ ವರ್ಗೀಸ್ ಹೇಳಿದರು.

ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 1,355 ಮತದಾರರಿದ್ದು, 100 ವರ್ಷ ಮೇಲ್ಪಟ್ಟವರು 21 ಹಾಗೂ 2,385 ಅಂಗವಿಕಲ ಮತದಾರರಿದ್ದಾರೆ. ಅಂಗವಿಕಲರಿಗೆ ಹಾಗೂ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅಂಚೆ ಪತ್ರದ ಮೂಲಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ಸೇವಾ ಮತದಾರರಿಗೆ ಅಂಚೆ ಪತ್ರದ ಮೂಲಕ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

‘ಚುನಾವಣಾ ಕಾರ್ಯ ಸುಗಮವಾಗಿ ನಿರ್ವಹಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಒಟ್ಟು 26 ಸೆಕ್ಟರ್ ಆಫೀಸರ್, ಅಕೌಂಟಿಂಗ್ ಟೀಮ್ 1, 1 ವಿವಿಟಿ , 3 ವಿಎಸ್.ಟಿ, ಒಟ್ಟು ತನಿಖಾ ಠಾಣೆ 8, ಹಳಿಯಾಳ 3, ಜೊಯಿಡಾ 3, ದಾಂಡೇಲಿ 2 ತನಿಖಾ ಠಾಣೆ ತೆರೆಯಲಾಗಿದೆ’ ಎಂದರು.

‘ಮಾದರಿ ನೀತಿ ಸಂಹಿತೆ ಜೂನ್ 6 ವರೆಗೆ ಜಾರಿಯಲ್ಲಿದ್ದು, ರಾಜಕೀಯ ಸಂಬಂಧಿಸಿದ ಬ್ಯಾನರ್, ಬಂಟಿಂಗ್, ಪೋಸ್ಟರ್‌ಗಳನ್ನು ತೆಗೆಯಲು ವ್ಯವಸ್ಥೆ ಮಾಡಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಎಫ್.ಎಸ್.ಟಿ, ಎಸ್.ಎಸ್.ಟಿ, ವಿ.ಎಸ್.ಟಿ ಹಾಗೂ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ’ ಎಂದು ತಿಳಿಸಿದರು.

‘50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸುವಾಗ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಧ್ವನಿವರ್ಧಕ ಬಳಕೆ, ಚುನಾವಣೆಗೆ ಸಂಬಂಧಿಸಿದ ಸಭೆ- ಸಮಾರಂಭಗಳಿಗೆ ಅವಕಾಶವಿಲ್ಲ. ಅಭ್ಯರ್ಥಿಗಳು, ರಾಜಕೀಯ ಪಕ್ಷದವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು. ಚುನಾವಣೆಗೆ ಸಂಬಂಧಿಸಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದೂರುಗಳಿದ್ದರೆ 08284-220134 ಗೆ ದೂರವಾಣಿ ಸಂಪರ್ಕಿಸಬಹುದು’ ಎಂದರು.

ತಹಶೀಲ್ದಾರ್ ಆರ್.ಎಚ್ ಬಾಗವಾನ, ಸಿಪಿಐ ಜೈಪಾಲ್ ಪಾಟೀಲ್ ಜೊಯಿಡಾ ತಹಶೀಲ್ದಾರ್ ಇನ್ನಿತರ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT