‘4 ಜನ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಇಲ್ಲಿಯ ಮಿಡ್ಲ್ ಬೀಚಿನ ಕರಿಯಪ್ಪಕಟ್ಟೆಯ ಬಳಿಯ ಆರ್.ಕೆ.ಕಾಟೇಜ್ ಎದುರಿನ ಸಮುದ್ರ ದಂಡೆಲ್ಲಿ ಗಾಂಜಾ ಸೇವಿಸಿದ ಅಮಲಿನಲ್ಲಿ ತೇಲಾಡುತ್ತಿದ್ದಾಗ ಸಿ.ಪಿ.ಐ ವಸಂತ ಆಚಾರ್ ನೇತೃತ್ವದ ಪೊಲೀಸ್ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಸಂಶಯ ಬಂದ ಪೊಲೀಸರು ನಾಲ್ಕೂ ಜನರನ್ನು ವಶಕ್ಕೆ ಪಡೆದು ವೈದ್ಯಕೀಯ ತಪಾಸಣೆೆಗೆ ಒಳಪಡಿಸಿದಾಗ, ಇಬ್ಬರು ಗಾಂಜಾ ಸೇವಿಸಿದ್ದು ದೃಢಪಟ್ಟಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.