ದಾಂಡೇಲಿ: ನಗರದ ಜೆ.ಎನ್.ರಸ್ತೆಯು ತೀವ್ರವಾಗಿ ಹದಗೆಟ್ಟಿದ್ದು, ರಸ್ತೆ ತುಂಬಾ ಹೊಂಡ ಗುಂಡಿಗಳು ತುಂಬಿ ಸುಗಮವಾಹನ ಸಂಚಾರ ದುಸ್ತರವಾಗಿದೆ. ದುರಸ್ತಿಗೆ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರದ ಅಟಲ್ ಅಭಿಮಾನಿ ಸಂಘಟನೆ ಹಾಗೂ ರಾಯಲ್ ಆಟೋ ಚಾಲಕರು ಸಂಘದ ಸದಸ್ಯರು ಒತ್ತಾಯಿಸಿದ್ದಾರೆ. ಅಲ್ಲದೆ ಜೆ. ಎನ್. ರಸ್ತೆಯ ಹೊಂಡಗಳನ್ನು ತಾತ್ಕಾಲಿಕವಾಗಿ ಸ್ವತಃ ಖರ್ಚಿನಲ್ಲಿ ಸಿಮೆಂಟ್ ಹಾಕಿ ಮುಚ್ಚಿದ್ದು ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಅಟಲ್ ಅಭಿಮಾನಿ ಸಂಘಟನೆಯ ಅಧ್ಯಕ್ಷ ವಿಷ್ಣು ನಾಯರ ಮಾತನಾಡಿ, ಪ್ರತಿ ವರ್ಷವೂ ಈ ರಸ್ತೆಯ ದುರಸ್ತಿಗಾಗಿ ಹೋರಾಟ ಮಾಡಲೇಬೇಕಾಗಿದೆ. ಯು.ಜಿ.ಡಿ ಕಾಮಗಾರಿಯಿಂದಾಗಿ ಹದಗೆಟ್ಟಿರುವ ಈ ರಸ್ತೆಯ ಶಾಶ್ವತ ದುರಸ್ತಿಗೆ ಇದುವರೆಗೆ ಅಗತ್ಯ ಕ್ರಮ ಕೈಗೊಳ್ಳದಿರುವುದು ದುರ್ದೈವ. ರಸ್ತೆ ದುರಸ್ತಿಗೆ ನಗರಾಡಳಿತ ತ್ವರಿತ ಕ್ರಮವನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಅಟಲ್ ಅಭಿಮಾನಿ ಸಂಘಟನೆಯ ಪ್ರಮುಖರಾದ ಹನೀಫ್ ಬೋಚಳ್ಳಿ , ಅನೀಶ ಸನದಿ, ಅಲ್ತಾಫ್ ಪಿರ್ಜಾದೆ, ಯೂನುಸ್, ಪಟೇಲ್, ಪಾಂಡುರಂಗ, ಮೊಟಾಚೆ, ಲಕ್ಷ್ಮಣ್ ನಾಯ್ಕ, ಉಸ್ಮಾನ್ ಶೇಖ, ಮಹಮ್ಮದ್, ಅಲಿ ಕಳಸಾಪುರ, ಬಾಳಪ್ಪ, ಕುಂಬಾರ, ಹನೀಫ್ ಖಾನ್, ಇರ್ಷಾದ್ ಸೈಯದ್, ಬಸವರಾಜ ಇಳಿಗೆ, ಅಲ್ತಾಫ್ ಚೋದ್ರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.