ಕಾರವಾರದಲ್ಲಿ ಅಕ್ಕ ಕೆಫೆ ಉದ್ಘಾಟಿಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಬೋಂಡಾ ಸವಿದರು.
ದೇಶದ ರಕ್ಷಣೆ ಉದ್ದೇಶಕ್ಕೆ ಭೂಮಿ ನೀಡಿದ ಕುಟುಂಬಗಳಿಗೆ ಬಹಳ ತಡವಾಗಿ ಹೆಚ್ಚುವರಿ ಪರಿಹಾರ ಬಂದಿದೆ. ಇನ್ನುಳಿದ ಪರಿಹಾರವನ್ನಾದರೂ ಕೇಂದ್ರ ಸರ್ಕಾರ ಬೇಗ ನೀಡಲಿ
ಮಂಕಾಳ ವೈದ್ಯ ಜಿಲ್ಲಾ ಉಸ್ತುವಾರಿ ಸಚಿವ
ಪುನರ್ವಸತಿ ಕಾಲೊನಿಗಳಿಗೆ ಸೌಕರ್ಯ
‘ಕಾರವಾರ ತಾಲ್ಲೂಕಿನ ಮುದಗಾ ತೋಡೂರು ಚಿತ್ತಾಕುಲ ಮುಡಗೇರಿ ಸೇರಿದಂತೆ ನೌಕಾನೆಲೆ ನಿರಾಶ್ರಿತರ ಪುನರ್ವಸತಿ ಕೇಂದ್ರಗಳ ಅಭಿವೃದ್ದಿಗೆ ಯೋಜನೆ ರೂಪಿಸಲಾಗುತ್ತಿದೆ. ರಸ್ತೆ ನೀರು ಬೀದಿದೀಪಗಳು ಇನ್ನಿತರ ಅಗತ್ಯ ಸೌಕರ್ಯಗಳ ಕೊರತೆ ಕೆಲವೆಡೆ ಇರುವುದು ಗಮನಕ್ಕೆ ಬಂದಿದೆ. ಪರಿಶೀಲಿಸಿದ ವರದಿ ಸಲ್ಲಿಸಲು ಅಧಿಕಾರಿಗಳಿಗೂ ಸೂಚಿಸಲಾಗಿದೆ. ಕಾಲೊನಿಗಳ ಮೂಲಭೂತ ಸೌಕರ್ಯಗಳ ಕೊರತೆ ನೀಗಿಸಲಾಗುವುದು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭರವಸೆ ನೀಡಿದರು.