ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಟ್ಕಳ | ಹಣ ದುರುಪಯೋಗ: ಮೂರನೇ ಆರೋಪಿ ಬಂಧನ

Published 23 ಜೂನ್ 2024, 15:31 IST
Last Updated 23 ಜೂನ್ 2024, 15:31 IST
ಅಕ್ಷರ ಗಾತ್ರ

ಭಟ್ಕಳ: ಶ್ರೀರಾಮ ಫೈನಾನ್ಸ್‌ ಭಟ್ಕಳ ಶಾಖೆಯ ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರ ನಿವಾಸಿ ರಾಜೀವ ರಾಘವೇಂದ್ರ ಸ್ವಾಮಿ ಬಂಧಿತ ಅರೋಪಿ. ಸಂಸ್ಥೆಯಲ್ಲಿ ವಾಹನ ಸಾಲ ಪಡೆದ ಗ್ರಾಹಕರಿಂದ ಸಾಲ ವಸೂಲಾತಿ ಮಾಡಿ ಬ್ಯಾಂಕಿಗೆ ಜಮಾ‌ ಮಾಡದೇ ನಕಲಿ ದಾಖಲೆ‌ ಪತ್ರ ಸೃಷ್ಟಿಸಿ ಸಾಲ ಚುಕ್ತಾ ಅದ ಬಗ್ಗೆ ನಿರಾಪೇಕ್ಷಣಾ ಪತ್ರ ನೀಡಿ ಅಂದಾಜು ₹ 89 ಲಕ್ಷ ಮೋಸ ಮಾಡಿರುವ ಬಗ್ಗೆ ಬ್ಯಾಂಕಿನಿಂದ ಮೂವರು ಸಿಬ್ಬಂದಿ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣದ ಇಬ್ಬರು ಆರೋಪಿಗಳನ್ನು ಕಳೆದ ವಾರ ಬಂಧಿಸಿದ ಪೊಲೀಸರು ಈಗ ಮೂರನೇ ಹಾಗೂ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT