ಮುಂಡಗೋಡ: ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ವರ್ಷಗಳಲ್ಲಿ ರಸ್ತೆ ಅಪಘಾತದಲ್ಲಿ 29 ಜನರು ಜೀವ ಕಳೆದುಕೊಂಡಿದ್ದಾರೆ. ಅವರ ಪೈಕಿ ಬೈಕ್ ಅಪಘಾತಗಳಲ್ಲಿ ದುರಂತ ಸಾವು ಕಂಡವರ ಸಂಖ್ಯೆಯೇ ಹೆಚ್ಚಿದೆ.

ಪ್ರಸಕ್ತ ವರ್ಷದಲ್ಲಿ 20ರಷ್ಟು ರಸ್ತೆ ಅಪಘಾತಗಳ ದುರ್ಘಟನೆ ಸಂಭವಿಸಿವೆ. ಇದರಲ್ಲಿ ಅರ್ಧದಷ್ಟು ಬೈಕ್ ಅಪಘಾತಗಳಾಗಿವೆ. ಹೆಲ್ಮೆಟ್ ಇಲ್ಲದೇ ಸವಾರಿ ಮಾಡುವಾಗ ಸಂಭವಿಸಿದ ಅಪಘಾತಗಳಲ್ಲಿ ಯುವಕರು ಜೀವ ಕಳೆದುಕೊಂಡ ಇಲ್ಲವೇ ಗಂಭೀರವಾಗಿ ಗಾಯಗೊಂಡ ಪ್ರಕರಣಗಳು ಹೆಚ್ಚಿವೆ.

‘ಸಾರಿಗೆ ಬಸ್ನಲ್ಲಿ ಸಂಚರಿಸುವಾಗ ಕಿಟಕಿಯಿಂದ ತಲೆಯನ್ನು ಹೊರಹಾಕಿದ ಪ್ರಯಾಣಿಕನೊಬ್ಬನಿಗೆ, ಎದುರುಗಡೆಯಿಂದ ಬರುತ್ತಿದ್ದ ಲಾರಿ ತಾಗಿದ ಪರಿಣಾಮ ಪ್ರಯಾಣಿಕ ಜೀವ ಕಳೆದುಕೊಂಡಿದ್ದ. ಇದೊಂದು ಅಪಘಾತವನ್ನು ಹೊರತುಪಡಿಸಿದರೆ, ಬಹುತೇಕ ಅಪಘಾತಗಳಲ್ಲಿ ಬೈಕ್ ಸ್ಕಿಡ್ ಆಗಿರುವುದು, ಮುಖಾಮುಖಿ ಡಿಕ್ಕಿ ಸಂಭವಿಸಿರುವುದು, ಇಲ್ಲವೇ ಮರಕ್ಕೆ ಡಿಕ್ಕಿ ಹೊಡೆದು ಅಪಘಾತಗಳು ಸಂಭವಿಸಿವೆ. ಬೆರಳೆಣಿಕೆಯಷ್ಟು ನಾಲ್ಕು ಅಥವಾ ಆರು ಚಕ್ರದ ವಾಹನಗಳಿಂದ ಅಪಘಾತಗಳು ಆಗಿವೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘2023ರಲ್ಲಿ ತಾಲ್ಲೂಕಿನಲ್ಲಿ ಸುಮಾರು 20 ರಸ್ತೆ ಅಪಘಾತಗಳು ಸಂಭವಿಸಿದ್ದು, ಅದರಲ್ಲಿ 13 ಜನರು ಜೀವ ಕಳೆದುಕೊಂಡಿದ್ದರು. 2024ರಲ್ಲಿಯೂ ಹೆಚ್ಚು ಕಡಿಮೆ ಅಷ್ಟೇ ಅಪಘಾತ ನಡೆದಿದ್ದು, 16 ಜನರು ಜೀವ ಕಳೆದುಕೊಂಡಿದ್ದಾರೆ’ ಎಂದೂ ಇಲಾಖೆಯ ಅಂಕಿ–ಅಂಶ ತಿಳಿಸಿದೆ.

‘ತಾಲ್ಲೂಕಿನಲ್ಲಿ ಬೈಕ್ಗಳ ಸಂಖ್ಯೆ ಪ್ರತಿವರ್ಷ ಏರಿಕೆಯಾಗುತ್ತಿದೆ. ಅದರಲ್ಲಿಯೂ ಯುವಸಮೂಹ ಜಿದ್ದಿಗೆ ಬಿದ್ದವರಂತೆ ಬೈಕ್ ಓಡಿಸುತ್ತ ಅಪಘಾತ ಮಾಡಿಕೊಳ್ಳುತ್ತಿದ್ದಾರೆ. ವೇಗದ ಸವಾರಿಯಿಂದಲೇ ಅಪಘಾತದ ಘಟನೆ ನಡೆದಿದ್ದು ಹೆಚ್ಚು. ಹೆಲ್ಮೆಟ್ ಧರಿಸದೇ ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ’ ಎನ್ನುತ್ತಾರೆ ವಕೀಲ ಗುಡ್ಡಪ್ಪ ಕಾತೂರ.

‘ತಾಲ್ಲೂಕಿನಲ್ಲಿ ಈ ವರ್ಷ 20 ರಸ್ತೆ ಅಪಘಾತಗಳು ದಾಖಲಾಗಿವೆ. ಬೈಕ್ ಸವಾರರ ವೇಗಕ್ಕೆ ನಿಯಂತ್ರಣ ಹಾಕಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಲಾಗಿದೆ. ಅತಿ ವೇಗ ಜೀವಕ್ಕೆ ಕಂಟಕವಾಗಲಿದ್ದು, ಹೆಲ್ಮೆಟ್ ಧರಿಸಿ ಬೈಕ್ ಓಡಿಸಿದರೆ, ಅಪಘಾತವಾದಾಗ ಪ್ರಾಣಾಪಾಯದಿಂದ ಪಾರಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ಯುವಕರಿಗೆ ತಿಳಿಹೇಳಲಾಗುತ್ತಿದೆ’ ಎಂದು ಸಿಪಿಐ ರಂಗನಾಥ ನೀಲಮ್ಮನವರ ಹೇಳಿದರು.

ಅಂಕಿ-ಅಂಶ

ವರ್ಷ;ಅಪಘಾತಗಳ ಸಂಖ್ಯೆ;ಸಾವು

2022;27;21

2023;20;13

2024;20;16

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.