ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಡಗೋಡ: ರಾಜ್ಯ ಹೆದ್ದಾರಿ ಪಕ್ಕ ಕಾಡುಕೋಣ ಪ್ರತ್ಯಕ್ಷ

Published 24 ಜೂನ್ 2023, 15:37 IST
Last Updated 24 ಜೂನ್ 2023, 15:37 IST
ಅಕ್ಷರ ಗಾತ್ರ

ಮುಂಡಗೋಡ: ತಾಲ್ಲೂಕಿನ ಗಡಿಭಾಗವಾದ ವಡಗಟ್ಟಾ ಚೆಕ್‌ಪೋಸ್ಟ್‌ನಿಂದ ಅನತಿ ದೂರದಲ್ಲಿ ರಾಜ್ಯ ಹೆದ್ದಾರಿ ಪಕ್ಕ ಕಾಡುಕೋಣ ಪ್ರತ್ಯಕ್ಷವಾಗಿದೆ.

ಶುಕ್ರವಾರ ಪಟ್ಟಣದಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ರಾಮಕೃಷ್ಣ ರಾಯ್ಕರ ಅವರಿಗೆ ರಸ್ತೆಯಂಚಿನ ಅರಣ್ಯದಲ್ಲಿ ಕಾಡುಕೋಣ ನಿಂತಿರುವುದು ಕಂಡುಬಂದಿದೆ. ಕೂಡಲೇ ವಾಹನವನ್ನು ನಿಲ್ಲಿಸಿ, ವೀಕ್ಷಿಸುತ್ತಿರುವಾಗ ಕಾಡುಕೋಣ ಕೆಲ ಹೊತ್ತು ಸ್ಥಳದಲ್ಲಿಯೇ ಇದ್ದು, ನಂತರ ಅರಣ್ಯದತ್ತ ಓಡಿ ಹೋಯಿತು.

‘ಮುಂಡಗೋಡ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ತಾಯವ್ವನ ದೇವಸ್ಥಾನದಿಂದ ವಡಗಟ್ಟಾ ಚೆಕ್‌ಪೋಸ್ಟ್‌ವರೆಗೆ ಕಾಡು ಪ್ರಾಣಿಗಳು ಆಗಾಗ ಪ್ರಯಾಣಿಕರಿಗೆ ಪ್ರತ್ಯಕ್ಷವಾಗುವುದನ್ನು ಕೇಳಿದ್ದೆ. ಆದರೆ, ಪ್ರತ್ಯಕ್ಷವಾಗಿ ನೋಡಿರಲಿಲ್ಲ. ರಸ್ತೆಗೆ ಬರಲು ನಿಂತಿದ್ದ ಕಾಡುಕೋಣವು ವಾಹನಗಳ ಓಡಾಟದಿಂದ ರಸ್ತೆಯಂಚಿನಿಂದ ಹತ್ತಾರು ಹೆಜ್ಜೆಗಳ ದೂರದಲ್ಲಿ ನಿಂತಿತ್ತು. ವಾಹನವನ್ನು ನಿಲ್ಲಿಸಿ ವೀಕ್ಷಿಸುತ್ತಿರುವಾಗ ಮರಳಿ ಕಾಡಿಗೆ ಓಡಿತು’ ಎಂದು ಪ್ರತ್ಯಕ್ಷದರ್ಶಿ ರಾಮಕೃಷ್ಣ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT