ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣಗುರು ಶಾಲೆಯಲ್ಲಿ ಸೌಕರ್ಯದ ಕೊರತೆ

ಶೈಕ್ಷಣಿಕ ವರ್ಷ ಮುಗಿಯುತ್ತಾ ಬಂದರೂ ಪೂರೈಕೆಯಾಗದ ಅಗತ್ಯ ವಸ್ತುಗಳು
Last Updated 24 ಜನವರಿ 2023, 19:30 IST
ಅಕ್ಷರ ಗಾತ್ರ

ಭಟ್ಕಳ: ಕಳೆದ ಜುಲೈನಲ್ಲಿ ಭಟ್ಕಳದಲ್ಲಿ ಆರಂಭವಾದ ಬ್ರಹ್ಮಶ್ರೀ ನಾರಾಯಣ ಗುರು ವಸತಿ ಶಾಲೆಗೆ ಹಲವು ಮೂಲಸೌಕರ್ಯಗಳ ಕೊರತೆ ಕಾಡುತ್ತಿದೆ. ಇದರಿಂದಾಗಿ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ ಸಾಲಿನ ಬಜೆಟ್‍ನಲ್ಲಿ ಬಿಜೆಪಿ ಸರ್ಕಾರ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿನಲ್ಲಿ ಮೂರು ವಸತಿ ಶಾಲೆ ಘೋಷಣೆ ಮಾಡಿ ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣ ಮಾಡಲು ₹28 ಕೋಟಿ ಅನುದಾನ ನೀಡುವ ಭರವಸೆ ನೀಡಿತ್ತು. ಮೂರರ ಪೈಕಿ ಒಂದು ಶಾಲೆಯನ್ನು ಭಟ್ಕಳದಲ್ಲಿ ಆರಂಭಿಸಲಾಗಿದೆ. ಅದು ಇಲ್ಲಿನ ಪುರವರ್ಗದ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ.

ವಸತಿ ಶಾಲೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಯ್ಕೆಯಾದ 50 ವಿದ್ಯಾರ್ಥಿಗಳು 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಈವರೆಗೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಶೂ ಹಾಗೂ ಸಮವಸ್ತ್ರ ವಿತರಣೆ ಮಾಡಿಲ್ಲ. ತಾಲ್ಲೂಕಿನ ಉಳಿದ ವಸತಿ ಶಾಲೆಗಳ ವಿದ್ಯಾರ್ಥಿಗಳಿಗೆ ಕಳೆದ ಅಕ್ಟೋಬರ್ ವೇಳೆಗೆ ಎಲ್ಲವನ್ನೂ ಪೂರೈಸಲಾಗಿದೆ.

‘ನಿತ್ಯ ಉಪಯೋಗಿಸುವ ಸೋಪು, ಟೂತ್‍ಪೇಸ್ಟ್ ಸೇರಿದಂತೆ ಅಗತ್ಯ ವಸ್ತುಗಳನ್ನೂ ಒದಗಿಸಿಲ್ಲ. ಸ್ಥಳೀಯ ವಿದ್ಯಾರ್ಥಿಗಳು ಪಾಲಕರಿಂದ ಅಗತ್ಯ ವಸ್ತು ತರಿಸಿಕೊಳ್ಳುತ್ತಿದ್ದಾರೆ. ದೂರದ ಊರುಗಳಿಂದ ಬಂದಿರುವ ನಮಗೆ ಅಗತ್ಯ ಸಾಮಗ್ರಿ ತರಿಸಿಕೊಳ್ಳುವುದು ಕಷ್ಟವಾಗಿದೆ’ ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡರು.

‘ಪ್ರಸಕ್ತ ಶೈಕ್ಷಣಿಕ ಸಾಲಿನ ಪಠ್ಯಪುಸ್ತಕ ಶಾಲೆಗೆ ಪೂರೈಕೆ ಆಗಿಲ್ಲ. ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಬೇರೆ ವಸತಿ ಶಾಲೆಗಳಿಂದ ಪುಸ್ತಕ ತರಿಸಿ ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಶೂ, ಸಮವಸ್ತ್ರ ಹಾಗೂ ಸೋಪ್‍ಕಿಟ್‍ಗಳು ಇನ್ನಷ್ಟೇ ಪೂರೈಕೆ ಆಗಬೇಕಾಗಿದೆ’ ಎಂದು ನಾರಾಯಣ ಗುರು ವಸತಿ ಶಾಲೆ ಪ್ರಾಚಾರ್ಯ ರಮೇಶ ನಾಯ್ಕ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸಮವಸ್ತ್ರ ಇನ್ನಿತರ ಅಗತ್ಯ ವಸ್ತು ಪೂರೈಕೆ ಆಗಿಲ್ಲ. ಸೋಪ್‍ಕಿಟ್ ಗಳನ್ನು ಪೂರೈಸಲು ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು.

ರಾಜು ನಾಯ್ಕ, ಪಾಲಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT