ಕಾರವಾರ: ಚೌತಿ ಹಬ್ಬದ ಆಚರಣೆಗೆ ನಗರದಲ್ಲಿ ಗುರುವಾರ ಭರ್ಜರಿ ಸಿದ್ಧತೆಗಳು ಕಂಡುಬಂದವು. ಸಾರ್ವಜನಿಕರು ಅಗತ್ಯ ವಸ್ತುಗಳ ಖರೀದಿಗೆ ಮಾರುಕಟ್ಟೆಯಲ್ಲಿ ಸೇರಿದ್ದರು.

ನಗರದ ಗಾಂಧಿ ಮಾರುಕಟ್ಟೆ, ಹೂವಿನ ಚೌಕ, ಸವಿತಾ ಹೋಟೆಲ್ ವೃತ್ತ, ಗಣಪತಿ ದೇವಸ್ಥಾನದ ಸುತ್ತಮುತ್ತ ಹೂವು, ಹಣ್ಣು, ಫಲಾವಳಿಗಳ ಮಾರಾಟ ಜೋರಾಗಿತ್ತು. ಸಾವಿರಾರು ಜನರು ಸೇರಿದ್ದರಿಂದ ರಸ್ತೆಗಳಲ್ಲಿ ವಾಹನ ಮತ್ತು ಜನದಟ್ಟಣೆ ಉಂಟಾಗಿತ್ತು. ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸ ಪಡಬೇಕಾಯಿತು.

ಫಲಾವಳಿಗಳ ಪ್ರತಿ ಕಟ್ಟು ₹ 50ರಿಂದ ₹ 70ರಂತೆ ಮಾರಾಟವಾದರೆ, ಸಣ್ಣ ಗಾತ್ರದ ಸೇವಂತಿಗೆ ಹೂವಿನ ಒಂದು ಮಾರು ₹ 100, ದೊಡ್ಡ ಗಾತ್ರದ್ದಕ್ಕೆ ₹ 200, ಕೆಂಪು ಸೇವಂತಿಗೆ ₹ 200ರ ಆಸುಪಾಸಿನ ದರದಲ್ಲಿ ಮಾರಾಟವಾದವು.

ಕಾರವಾರ, ಅಂಕೋಲಾ ಭಾಗದಲ್ಲಿ ಚೌತಿ ಹಬ್ಬದ ಸಂದರ್ಭದಲ್ಲಿ ‘ಗುಮಟೆ ಪಾಂಗ್’ ವಿಶೇಷವಾಗಿದೆ. ಈ ಚರ್ಮ ವಾದ್ಯವು ಅಷ್ಟಾಗಿ ಬೇಡಿಕೆ ಪಡೆಯಲಿಲ್ಲ. ₹ 800ರಿಂದ ₹ 1,200ರವರೆಗೂ ದರ ನಿಗದಿಯಾಗಿದ್ದವು. ಆದರೆ, ಕೋವಿಡ್ ಕಾರಣದಿಂದ ಜನ ಆರ್ಥಿಕ ಸಂಕಷ್ಟದಲ್ಲಿದ್ದು, ಖರೀದಿ ಮಾಡುವವರ ಸಂಖ್ಯೆ ಕಡಿಮೆಯಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.