ಭಟ್ಕಳ: ಪಟ್ಟಣದಲ್ಲಿ ಆರು ವರ್ಷಗಳಿಂದ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಖತೀಜಾ ಮೆಹೆರಿನ್ ಬಂಧನದ ಬೆನ್ನಲ್ಲೇ ಪೊಲೀಸರು, ಸರ್ಕಾರದಿಂದ ನೀಡುವ ವಿವಿಧ ದಾಖಲೆಗಳನ್ನು ಪಡೆದುಕೊಂಡ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಅವರು ಪಟ್ಟಣದ ನವಾಯತ ಕಾಲೊನಿಯ ತಂಝೀಂ ರಸ್ತೆಯಲ್ಲಿರುವ ಪತಿ ಜಾವೀದ್ ಮೋಹಿದ್ದೀನ್ ರುಕ್ನುದ್ದೀನ್ ಮನೆಯಲ್ಲಿ ಅಕ್ರಮವಾಗಿ ವಾಸವಿದ್ದರು. ಆದರೆ, ತಾನು ಭಟ್ಕಳದಲ್ಲೇ ಜನಿಸಿದ್ದಾಗಿ ಪುರಸಭೆಯಿಂದ ಜನ್ಮದಾಖಲೆ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಅದರ ಆಧಾರದಲ್ಲಿ ಆಧಾರ್ ಕಾರ್ಡ್, ಪ್ಯಾನ್‌ಕಾರ್ಡ್, ಚುನಾವಣಾ ಗುರುತಿನ ಚೀಟಿ ಮಾಡಿಸಿಕೊಂಡಿದ್ದಾರೆ. ಹಾಗಾಗಿ, ಯಾವ ದಾಖಲೆಯ ಆಧಾರದಲ್ಲಿ ಪುರಸಭೆಯವರು ಜನ್ಮದಾಖಲೆ ನೀಡಿದ್ದಾರೆ ಎನ್ನುವುದು ತನಿಖೆಯಾಗುತ್ತಿದೆ.

ಪುರಸಭೆಯಿಂದ ಜನ್ಮದಾಖಲೆ ನೀಡಬೇಕಾದರೆ ಅದು, ಅವರು ಜನನವಾದ ಸಮಯದಲ್ಲಿ ನೊಂದಣಿಯಾಗಿರಬೇಕು. ಇಲ್ಲವಾದರೆ ವಿಳಂಬ ನೋಂದಣಿ ಮೂಲಕ ನ್ಯಾಯಾಲಯದಲ್ಲಿ ದಾವೆ ಹೂಡಿ ಜನ್ಮ ದಾಖಲೆ ಪಡೆಯಲು ಅವಕಾಶವಿದೆ. ಹೀಗೆ ದಾವೆ ಹೂಡುವ ಮೊದಲು ಪುರಸಭೆಯಿಂದ ನೋಂದಣಿ ಆಗದೇ ಇರುವ ಬಗ್ಗೆ ಪ್ರಮಾಣ ಪತ್ರ (ಅಲಭ್ಯ ಪ್ರಮಾಣಪತ್ರ) ಪಡೆದುಕೊಳ್ಳಬೇಕು.

ಈ ಪ್ರಮಾಣ ಪತ್ರ ನೀಡುವಾಗ ಪುರಸಭೆಯು ಸ್ಥಳೀಯ ನಿವಾಸಿಯಾದ ಬಗ್ಗೆ ಫೋಟೊ ಇರುವ ಯಾವುದಾದರೊಂದು ಗುರುತಿನ ಚೀಟಿ ಪರಿಶೀಲಿಸಬೇಕಾಗುತ್ತದೆ. ಪಾಕಿಸ್ತಾನಿ ಮಹಿಳೆ ಹೀಗೆ ಪಡೆದುಕೊಳ್ಳುವಾಗ ನಕಲಿ ದಾಖಲೆ ಸೃಷ್ಟಿಸಿದ್ದರೇ ಅಥವಾ ಪುರಸಭೆಯ ಅಧಿಕಾರಿಗಳೇ ತಪ್ಪು ಎಸಗಿದ್ದಾರೆಯೇ ಎನ್ನುವುದು ತನಿಖೆಯಿಂದ ತಿಳಿದುಬರಲಿದೆ. ಒಂದೊಮ್ಮೆ ಪುರಸಭೆಯಿಂದ ತಪ್ಪಾಗಿದ್ದರೆ ಅಧಿಕಾರಿಗಳು ಕಾನೂನು ಕ್ರಮ ಎದುರಿಸುವ ಸಾಧ್ಯತೆಯಿದೆ.

‘ಮಾಹಿತಿ ಬಂದಿಲ್ಲ’:‘ಬಂಧಿತ ಪಾಕಿಸ್ತಾನಿ ಮಹಿಳೆ ಖತೀಜಾ ಮೆಹೆರೀನ್‌ಗೆ ಪುರಸಭೆಯಿಂದ ಜನ್ಮ ದಾಖಲೆ ನೀಡಿರುವ ಬಗ್ಗೆ ಮಾಹಿತಿ ಬಂದಿಲ್ಲ. ಒಂದು ವೇಳೆ ವಿಳಂಬ ನೋಂದಣಿ ಮೂಲಕ ಅವರು ಜನ್ಮದಾಖಲೆ ಪಡೆದುಕೊಂಡಿದ್ದರೆ, ಅವರಿಂದ ಸ್ಥಳೀಯ ನಿವಾಸಿ ಬಗ್ಗೆ ಗುರುತಿನ ದಾಖಲೆ ಪರಿಶೀಲಿಸಿ ಅಲಭ್ಯ ಪತ್ರ ನೀಡಲಾಗಿರುತ್ತದೆ’ ಎಂದು ಭಟ್ಕಳ ಪುರಸಭೆ ಮುಖ್ಯಾಧಿಕಾರಿ ದೇವರಾಜು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:ಭಟ್ಕಳ: ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನಿ ಮಹಿಳೆ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.