ಹಳಿಯಾಳ: ತಾಲ್ಲೂಕಿನಲ್ಲಿ ಗುರುವಾರ ಸುರಿದ ಮಳೆಯಿಂದ ಒಂಬತ್ತು ಮನೆಗಳ ಗೋಡೆಗಳು ಸಂಪೂರ್ಣ ಕುಸಿದಿವೆ.

ಗ್ರಾಮೀಣ ಭಾಗದಲ್ಲಿ 7 ಮನೆಗಳ ಗೋಡೆ ಹಾಗೂ ಪಟ್ಟಣದಲ್ಲಿ ಎರಡು ಮನೆಗಳ ಗೋಡೆಗಳು ಬಿದ್ದಿದ್ಮು, ಹಾನಿಗೀಡಾದ ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರು ತೆರಳಿ ಪರಿಶೀಲಿಸಿದರು. ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಪರಿಸರ ಎಂಜಿನಿಯರ್ ಅವರು ಹಾನಿ ಪರಿಶೀಲಿಸಿದರು.

ಮುರ್ಕವಾಡ ಗ್ರಾಮದ ಇಂದಿರಾ ಕೃಷ್ಣಾ ಗೌಡಾ, ಕೆ.ಕೆ.ಹಳ್ಳಿ ಗ್ರಾಮದ ಖೈರುಂಬೀ ರಸೂಲಸಾಬ ಮುಲ್ಲಾ, ಜತಗಾ ಗ್ರಾಮದ ಸೈಬಿ ಅಬ್ದುಲಸಾಬ ದೇವಕಾರೆ, ಹಳಿಯಾಳ ಪಟ್ಟಣದ ಕಸಬಾಗಲ್ಲಿಯ ಮಹೇಕ ದುರ್ಗಾಡಿ, ಹೊಸೂರಗಲ್ಲಿಯ ದೇಮುನಿಸಾ ಮುಲ್ಲಾ ಅವರ ಮನೆಗೋಡೆಗಳು ಕುಸಿದಿವೆ. ಪಟ್ಟಣದಲ್ಲಿ 7.8 ಸೆಂ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಮುಂದಿನ ವಾರ ಕಟಾವು ಆಗಬೇಕಿದ್ದ ಮೆಕ್ಕೆಜೋಳ ಹಾಗೂ ಭತ್ತದ ಪೈರು ನೆಲಕ್ಕುರುಳಿ ಹಾನಿಗೀಡಾಗಿದೆ. ಕೃಷಿ ಹಾಗೂ ಕಂದಾಯ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.