ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಂಡೇಲಿ: ದೇವಸ್ಥಾನಗಳಲ್ಲಿ ನೇರ ಪ್ರಸಾರ ವೀಕ್ಷಣೆಗೆ ಅವಕಾಶ

Published 22 ಜನವರಿ 2024, 13:32 IST
Last Updated 22 ಜನವರಿ 2024, 13:32 IST
ಅಕ್ಷರ ಗಾತ್ರ

ದಾಂಡೇಲಿ: ಅಯೋಧ್ಯೆಯಲ್ಲಿ ರಾಮ ಮಂದಿರದ ಲೋಕಾರ್ಪಣೆ ಹಾಗೂ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ವೆಸ್ಟ್ ಕೋಸ್ಟ್ ಪೇಪರ್‌ನ ಶ್ರೀರಾಮ ಮಂದಿರ, ಹಳಿಯಾಳ ರಸ್ತೆಯ, ವಿನಾಯಕ ನಗರ ಕೋಗಿಲಬನ, ಜೆ.ಎನ್.ರಸ್ತೆ , ಲಿಂಕ್ ರಸ್ತೆ ಮಾರುತಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ರಾಮತಾರಕ ಯಜ್ಞ,ರಾಮ ಜಪ, ಮಹಾ ಮಂಗಳಾರತಿ ಪ್ರಸಾದ ವಿತರಿಸಲಾಯಿತು.

ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಎಲ್ಇಡಿ ಪರದೆಯಲ್ಲಿ ಕಾರ್ಯಕ್ರಮದ ನೇರಪ್ರಸಾರಕ್ಕೆ ಅವಕಾಶ ಮಾಡಲಾಗಿತ್ತು.
ಕೋಗಿಲಬನನ ಮಾರುತಿ ಮಂದಿರದಲ್ಲಿ ಅನ್ನಪ್ರಸಾದದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ನಗರದ ಪ್ರತಿ ಮನೆಗಳಲ್ಲೂ ಹಾಗೂ ಎಲ್ಲಾ ರಸ್ತೆಗಳಲ್ಲಿ ಕೇಸರಿ ಧ್ವಜ, ಬಂಟಿಂಗ್‌ಗಳಿಂದ ಅಲಂಕರಿಸಿ, ಸರ್ಕಲ್‌ಗಳಲ್ಲಿ 15 ಅಡಿ ಶ್ರೀ ರಾಮನ ಬ್ಯಾನರ್‌ಗಳನ್ನು ಹಾಕಲಾಗಿತ್ತು.

ಕೇಸರಿ ಶಾಲುಗಳಿಗೆ ಭಾರಿ ಬೇಡಿಕೆ: ನಗರದ ಪ್ರಮುಖ ಅಂಗಡಿಗಳಲ್ಲಿ  ಭಾನುವಾರದಿಂದಲೇ ಧ್ವಜ, ಶಾಲು, ಅಂಗಿ, ಪೇಟಾಗಳ ವ್ಯಾಪಾರ ಜೋರಾಗಿತ್ತು. ಸೋಮವಾರ ಕೇಸರಿ ಶಾಲು ಇತರೆ ಸಾಮಗ್ರಿ ಲಭ್ಯವಿರಲಿಲ್ಲ. 

ರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ಧನುಧಾರಿ ಶ್ರೀರಾಮ ಫೋಟೊಗಳಿಗೆ ದಿಢೀರ್‌ ಬೇಡಿಕೆ ಹೆಚ್ಚಾಗಿದ್ದು, ಸಾವಿರಕ್ಕೂ ಹೆಚ್ಚು  ಫೋಟೋಗಳು ಮಾರಾಟವಾಗಿವೆ. 

ದಾಂಡೇಲಿಯ ಹಳಿಯಾಳ ರಸ್ತೆಯ ಮಾರುತಿ ಮಂದಿರದಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ದಾಂಡೇಲಿಯ ಹಳಿಯಾಳ ರಸ್ತೆಯ ಮಾರುತಿ ಮಂದಿರದಲ್ಲಿ ಭಕ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT