ಮಧ್ಯಾರಾಧನೆ ಅಂಗವಾಗಿ ಗುರುವಾರ ಬೆಳಿಗ್ಗೆ ರಾಯರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ತುಳಸಿ ಅರ್ಚನೆ, ಹಯಗ್ರೀವ ಅರ್ಪಿಸಿ ನಂತರ ಭಕ್ತರಿಂದ ರಾಯರ ಪಾದ ಪೂಜೆ ನಡೆಸಲಾಯಿತು. ಮಧ್ಯಾಹ್ನ ರಾಯರ ಬೃಂದಾವನಕ್ಕೆ ಮಹಾಪೂಜೆ ನಡೆಸಿದ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲಾಯಿತು. ರಾತ್ರಿ ಬೃಂದಾವನಕ್ಕೆ ಹೂವಿನ ಅಲಂಕಾರದ ಪೂಜೆ ಸಲ್ಲಿಸಿದ ಬಳಿಕ ರಾಯರ ರಥೋತ್ಸವ ನಡೆಯಿತು.