ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರೇಣುಕಸ್ವಾಮಿ ಕೊಲೆ ಪ್ರಕರಣ: ದರ್ಶನ್ ಒಳಿತಿಗೆ ಸಹೋದರಿ ಪತಿಯಿಂದ ಪ್ರಾರ್ಥನೆ, ಪೂಜೆ

Published 15 ಜೂನ್ 2024, 15:34 IST
Last Updated 15 ಜೂನ್ 2024, 15:34 IST
ಅಕ್ಷರ ಗಾತ್ರ

ಕಾರವಾರ: ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ನಿರ್ದೋಷಿಯಾಗಿ ಹೊರಬರಲಿ ಎಂದು ಅವರ ಹಿರಿಯ ಸಹೋದರಿ ದಿವ್ಯಾ ಮತ್ತು ಕೈಗಾದಲ್ಲಿ ಎಂಜಿನಿಯರ್ ಆಗಿರುವ ‌ಇವರ ಪತಿ ಮಂಜುನಾಥ ಅವರು ತಾಲ್ಲೂಕಿನ ಮಲ್ಲಾಪುರದ ಕೈಗಾ ಟೌನ್‍ಶಿಪ್‍ನಲ್ಲಿನ ರಾಮಲಿಂಗೇಶ್ವರ, ಶನೀಶ್ವರ ದೇವಾಲಯದಲ್ಲಿ ಶನಿವಾರ ಪೂಜೆ ಸಲ್ಲಿಸಿದರು. ದರ್ಶನ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ ಅವರು, ನವಗ್ರಹ ಪೂಜೆ, ಶನಿಶಾಂತಿ ಪೂಜೆಯೂ ನೆರವೇರಿಸಿದರು.

‘ದರ್ಶನ್ ವ್ಯಕ್ತಿಗತವಾಗಿ ಒಳ್ಳೆಯವರು. ಅವರನ್ನು ಕೆಲವರು ಪ್ರಚೋದಿಸಿ ತಪ್ಪು ದಾರಿಗೆ ಎಳೆದಿರಬಹುದು. ಅವರ ಏಳ್ಗೆ ಸಹಿಸದವರಿಂದ ಇಂತಹ ಕೃತ್ಯ ನಡೆದಿರುವ ಸಾಧ್ಯತೆ ಇದೆ. ಅವರ ಒಳಿತಿಗೆ ಪ್ರಾರ್ಥಿಸಿ, ಪೂಜೆ ಸಲ್ಲಿಸಲಾಗಿದೆ’ ಎಂದು ಮಂಜುನಾಥ ಸುದ್ದಿಗಾರರಿಗೆ ತಿಳಿಸಿದರು.

ಮಂಜುನಾಥ
ಮಂಜುನಾಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT