ಶಿರಸಿ: ಬೇಡ್ತಿ–ವರದಾ ನದಿ ಜೋಡಣೆ ವಿಷಯ ಚರ್ಚೆಯಲ್ಲಿರುವಾಗಲೇ ತಾಲ್ಲೂಕಿನ ಸಾಲಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಸರ್ವೆ ಮಾಡುತ್ತಿದ್ದುದನ್ನು ಕಂಡ ಸ್ಥಳೀಯರು ತಡೆದು ಪ್ರಶ್ನಿಸಿದ್ದು, ಅಪರಿಚಿತರ ನಡೆ ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಮಣದೂರು ಗ್ರಾಮದ ದುಗ್ಗುಮನೆ, ಯಡಿಮಠ, ತಟ್ಟೀಸರ ಸೇರಿದಂತೆ ಹಲವೆಡೆ ರಸ್ತೆ, ಮರಗಳಿಗೆ ಬಣ್ಣದಿಂದ ಗುರುತು ಮಾಡಿದ್ದು, ಶನಿವಾರ ಅನುಮಾನಾಸ್ಪದವಾಗಿ ಈ ಭಾಗದ ಸರ್ವೆ ನಡೆಸುತ್ತಿರುವುದನ್ನು ಸ್ಥಳೀಯರಾದ ವೆಂಕಟ್ರಮಣ ಹೆಗಡೆ ಗಮನಿಸಿದ್ದಾರೆ. ತಕ್ಷಣ ಗ್ರಾಮಸ್ಥರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಜಮಾಯಿಸಿದ ನೂರಕ್ಕೂ ಹೆಚ್ಚು ಜನರು ಅಧಿಕಾರಿಗಳನ್ನು ಪ್ರಶ್ನಿಸಿದ್ದು, ಯಾವುದೇ ಸ್ಪಷ್ಟ ಮಾಹಿತಿ ನೀಡದ ಅಧಿಕಾರಿಗಳ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ.

‘ಹೈದರಾಬಾದ್ ಮೂಲದ ಅಕ್ವಿಲಿಯಾ ಡ್ರಿಲ್ಲಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಹೆಸರಲ್ಲಿ ಸರ್ವೆ ನಡೆಸಲು ಬಂದ ಕೇರಳ ಮತ್ತು ರಾಜಸ್ಥಾನದ ಇಬ್ಬರು ವ್ಯಕ್ತಿಗಳು ಜಿಲ್ಲಾಧಿಕಾರಿಗಳಿಂದ ಪರವಾನಗಿ ಪಡೆದಿರುವುದಾಗಿ ತಿಳಿಸಿದ್ದಾರೆ. ಒಪ್ಪಿಗೆ ಪತ್ರದಲ್ಲಿ ಜಿಲ್ಲಾಧಿಕಾರಿ ಹಸ್ತಾಕ್ಷರ ಇರಲಿಲ್ಲ. ಈ ಬಗ್ಗೆ ವಿಚಾರಿಸಿದ್ದಕ್ಕೆ ತಡವರಿಸುತ್ತ ಉತ್ತರಿಸಿದ ಅವರು ಅಲ್ಲಿಂದ ಕಾಲ್ಕಿತ್ತಿದ್ದಾರೆ’ ಎಂದು ಸ್ಥಳೀಯರು ದೂರಿದ್ದಾರೆ.

ಈ ಬಗ್ಗೆ ಸ್ಥಳದಲ್ಲೇ ಇದ್ದ ಸಾಲಕಣಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಸೂಯಾ ಹೆಗಡೆ, ‘ತಮಗೆ ಯಾವುದೇ ಮಾಹಿತಿ ಇಲ್ಲ. ಹೀಗೆ ಏಕಾಏಕಿ ಸರ್ವೆ ನಡೆಸುವುದು ಸರಿಯಲ್ಲ’ ಎಂದು ಸರ್ವೆಗೆ ಬಂದ ವ್ಯಕ್ತಿಗಳನ್ನು ತರಾಟೆಗೆ ತೆಗೆದುಕೊಂಡರು.

ಬೇಡ್ತಿ ಅಘನಾಶಿನಿ ಕೊಳ್ಳ ಹಿತರಕ್ಷಣಾ ಸಮಿತಿ ಸಂಚಾಲಕ ಎನ್.ಎಸ್.ಭಟ್ ಮಣದೂರು, ಅರಣ್ಯ ಸಮಿತಿ ಅಧ್ಯಕ್ಷ ಶಿವಸುತ ಹೆಗಡೆ, ಸತೀಶ ಹೆಗಡೆ, ಸುಬ್ರಾಯಾ ಹೆಗಡೆ ತಟ್ಟೀಸರ, ಸುನಿಲ ಹೆಗಡೆ, ದಿನೇಶ ಹೆಗಡೆ ದುಗ್ಗುಮನೆ, ಇತರರು ಇದ್ದರು.

ಯಾವುದೇ ಮಾಹಿತಿ ಇಲ್ಲದೆ ಸರ್ವೆ ನಡೆಸುತ್ತಿರುವುದು ಸರಿಯಲ್ಲ. ಸ್ಥಳೀಯ ಆಡಳಿತದ ಗಮನಕ್ಕೂ ಬಾರದಂತೆ ಸರ್ವೆ ನಡೆಸುವುದು ಅಪರಾಧ ಎಂದು ಪರಿಗಣಿಸಿ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು
ರಮಾಕಾಂತ ಹೆಗಡೆ ಮಂಡೆಮನೆ ಬೇಡ್ತಿ ಅಘನಾಶಿನಿ ಕೊಳ್ಳ ಹಿತರಕ್ಷಣಾ ಸಮಿತಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.