ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಬನ್ ಬ್ಯಾಂಕಿಗೆ ₹ 4.06 ಕೋಟಿ ನಿವ್ವಳ ಲಾಭ

ಫಾಲೋ ಮಾಡಿ
Comments

ಶಿರಸಿ: ಇಲ್ಲಿನ ಅರ್ಬನ್ ಸಹಕಾರಿ ಬ್ಯಾಂಕ್ 2018-19ನೇ ಆರ್ಥಿಕ ವರ್ಷದಲ್ಲಿ ₹ 1175.94 ಕೋಟಿ ವ್ಯವಹಾರ ದಾಖಲಿಸಿ, ₹ 4.06 ಕೋಟಿ ಲಾಭ ಗಳಿಸಿದೆ.

113 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ಬ್ಯಾಂಕ್, ಒಟ್ಟು ಠೇವಣಿಯನ್ನು ₹ 734 ಕೋಟಿಗೆ, ದುಡಿಯುವ ಬಂಡವಾಳವನ್ನು ₹ 836 ಕೋಟಿಗೆ ಹೆಚ್ಚಿಸುವುದರೊಂದಿಗೆ ₹ 6.59 ಕೋಟಿ ನಿರ್ವಹಣಾ ಲಾಭ ದಾಖಲಿಸಿದೆ ಎಂದು ಅಧ್ಯಕ್ಷ ಜಯದೇವ ನಿಲೇಕಣಿ ತಿಳಿಸಿದ್ದಾರೆ.

ಬ್ಯಾಂಕಿನ ಸದಸ್ಯರ ಸಂಖ್ಯೆ 41,963 ದಾಟಿದ್ದು, ಸಂದಾಯಿತ ಶೇರು ಬಂಡವಾಳ ₹ 17.80 ಕೋಟಿ ತಲುಪಿದೆ. ಕಳೆದ ವರ್ಷದ ₹ 57.23 ಕೋಟಿ ಆದಾಯವನ್ನು ₹ 65.63 ಕೋಟಿಗೆ ಹೆಚ್ಚಿಸಿದೆ. ₹ 0.28 ಕೋಟಿ ಸ್ಟ್ಯಾಂಡರ್ಡ್‌ ಅಸೆಟ್‌ಗಳಿಗೆ ಅನುವು ಮಾಡಿ, ₹ 2.25 ಕೋಟಿ ಆದಾಯ ತೆರಿಗೆ ಪಾವತಿಸಿದೆ. ಈ ಆರ್ಥಿಕ ವರ್ಷದಲ್ಲಿ ಸಹ ಬ್ಯಾಂಕಿನ ಅನುತ್ಪಾದಕ ಆಸ್ತಿ ಪ್ರಮಾಣ ಸೊನ್ನೆ ಪ್ರತಿಶತ ಇದೆ.

ಬ್ಯಾಂಕಿನ ಸ್ವಂತ ಬಂಡವಾಳವು ₹ 77.63 ಕೋಟಿಯಿಂದ ₹ 82.02 ಕೋಟಿಗೆ ಏರಿಕೆಯಾಗಿದ್ದು, ದುಡಿಯುವ ಬಂಡವಾಳವು ₹ 737.52 ಕೋಟಿಯಿಂದ ₹ 836.21 ಕೋಟಿಗಳಿಗೆ ಏರಿಕೆಯಾಗಿದೆ. ₹ 800 ಕೋಟಿಗಿಂತಲೂ ಹೆಚ್ಚಿನ ದುಡಿಯುವ ಬಂಡವಾಳ ಮತ್ತು ₹ 1100 ಕೋಟಿಗಿಂತ ಹೆಚ್ಚಿನ ವಹಿವಾಟನ್ನು ಹೊಂದಿ, ರಾಜ್ಯದ 264 ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಅಗ್ರ ಹತ್ತರಲ್ಲಿ ಒಂದು ಸ್ಥಾನವನ್ನು ಭದ್ರಪಡಿಸಿಕೊಂಡು ಬಂದಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

ಆರ್ಥಿಕ ವರ್ಷದ ಅಂತ್ಯಕ್ಕೆ ₹ 442.17 ಕೋಟಿ ಸಾಲ ವಿತರಿಸಿದ್ದು, ಆದ್ಯತಾ ರಂಗಕ್ಕೆ ಶೇ 71.79ರ ಪ್ರಮಾಣದಲ್ಲಿ ಒಟ್ಟು ₹ 255.59 ಕೋಟಿ ಮತ್ತು ದುರ್ಬಲ ವರ್ಗದವರಿಗೆ ಶೇ 10.89ರ ಪ್ರಮಾಣದಲ್ಲಿ ₹ 38.78 ಕೋಟಿ ಸಾಲವನ್ನು ಬ್ಯಾಂಕ್ ವಿತರಿಸಿದೆ. ಬ್ಯಾಂಕಿನ ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ಸೊಲ್ಯೂಷನ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಪ್ರಧಾನ ಕಚೇರಿ ಸೇರಿದಂತೆ ಅನೇಕ ಶಾಖೆಗಳಲ್ಲಿ ಎಟಿಎಂ ಸೌಲಭ್ಯ ಅಳವಡಿಸಲಾಗಿದೆ.

ಆ.25ರಂದು ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯುವ ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಹಿರಿಯ ಸದಸ್ಯರನ್ನು ಗೌರವಿಸಲಾಗುವುದು. ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸಲಾಗುವುದು ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಶೆಟ್ಟರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT