ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾರಕಿಹೋಳಿ ಕ್ಷಮೆ ಕೇಳಲಿ:ಮುತಾಲಿಕ್

Last Updated 7 ನವೆಂಬರ್ 2022, 14:38 IST
ಅಕ್ಷರ ಗಾತ್ರ

ಶಿರಸಿ: ‘ಹಿಂದೂ ಪದ ಅಶ್ಲೀಲ ಎಂದು ಜರಿದಿರುವ ಸತೀಶ ಜಾರಕಿಹೋಳಿ ಹಿಂದೂ ಧರ್ಮೀಯರ ಕ್ಷಮೆ ಕೇಳಬೇಕು’ ಎಂದು ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ್ ಆಗ್ರಹಿಸಿದ್ದಾರೆ.

ನಗರದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿದ ಅವರು, ‘ಸ್ಮಶಾನದಲ್ಲಿ ಪೂಜೆ, ಮದುವೆ ಮಾಡುವ ಸತೀಶ್ ಒಬ್ಬ ನಾಸ್ತಿಕವಾದಿ. ಅವರಿಗೆ ಹಿಂದೂ, ಹಿಂದುತ್ವದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ. ಅವರ ಹೇಳಿಕೆ ಕಾಂಗ್ರೆಸ್ಸಿನವರ ಹಿಮದೂ ವಿರೋಧಿ ಭಾವನೆಯನ್ನು ಬಹಿರಂಗಪಡಿಸಿದೆ’ ಎಂದು ಆರೋಪಿಸಿದರು.

‘ಹಿಮದೂ ಎಂಬುದು ಯಾವುದೇ ಪಂಥ ಅಥವಾ ಜಾತಿಯ ಸೂಚಕವಲ್ಲ. ಅದೊಂದು ಜೀವನ ಪದ್ಧತಿ. ಸುಪ್ರಿಂಕೋರ್ಟ್ ಕೂಡ ಇದನ್ನು ಸ್ಪಷ್ಟಪಡಿಸಿದೆ. ಹಿಂದೂ ಶಬ್ದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇವನ್ನೆಲ್ಲ ಸತೀಶ್ ತಿಳಿದುಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT