ಸಿದ್ದಾಪುರ: ತಾಲ್ಲೂಕಿನ ತ್ಯಾಗಲಿಯ ಲಕ್ಷ್ಮೀನರಸಿಂಹ ದೇವರ ರಥೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶನಿವಾರ ನಡೆಯಿತು.

ತ್ಯಾಗಲಿ ರಥಬೀದಿಯ ಸದಾಸನ್ಮಯ ವೇದಿಕೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಸೇವಾಭಿನಂದನೆ ಹಾಗೂ ಸಾಧನಾಭಿನಂದನೆ ಕಾರ್ಯಕ್ರಮ ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.

ನಂತರ ಶಬರ ಸಂಸ್ಥೆ ಸೋಂದಾ ಹಾಗೂ ಸರಸ್ವತಿ ಕಲಾಟ್ರಸ್ಟ್ ಹೊಸಗದ್ದೆ ಇದರ ಬಾಲಕಲಾವಿದರಿಂದ ಸುಧನ್ವಾರ್ಜುನ ಯಕ್ಷಗಾನ ಪ್ರದರ್ಶನಗೊಂಡಿತು.

ಹಿಮ್ಮೇಳದಲ್ಲಿ ಶ್ರೀಪಾದ ಹೆಗಡೆ ಬಾಳೆಗದ್ದೆ, ಮಂಜುನಾಥ ಹೆಗಡೆ ಕಂಚಿಮನೆ, ಗಣೇಶ ಗಾಂವ್ಕರ್ ಯಲ್ಲಾಪುರ ಸಹಕರಿಸಿದರು.

ಮುಮ್ಮೇಳದಲ್ಲಿ ಅಭಯ ಹೆಗಡೆ ಹೊಸಗದ್ದೆ, ಭೂಮಿಕಾ ಹೆಗಡೆ ಹೊಸಗದ್ದೆ, ಮೌಲ್ಯ ಹೆಗಡೆ ಕಸೆಕುಣಿ, ಆದಿತ್ಯ ಹೆಗಡೆ ಹೊನ್ನೆಹದ್ದ, ಅಮಿತ್ ಭಟ್ಟ ಮಾಣಿಕ್ಯನಮನೆ, ಜನಾರ್ಧನ ತೊಂಡೆಮಡಕಿ ವಿವಿಧ ಪಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು.

ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ವೆಂಕಟರಮಣ ಎಂ. ಹೆಗಡೆ ಶಿಂಗು, ಕಾರ್ಯದರ್ಶಿ ರವಿ ಗೋಪಾಲ ಹೆಗಡೆ ಹಾಗೂ ಪದಾಧಿಕಾರಿಗಳು, ಶಬರ ಸಂಸ್ಥೆಯ ನಾಗರಾಜ ಜೋಶಿ ಸೋಂದಾ, ಸರಸ್ವತಿ ಕಲಾಟ್ರಸ್ಟ್ನ ಪಿ.ವಿ.ಹೆಗಡೆ ಹೊಸಗದ್ದೆ, ಪ್ರಸನ್ನ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.