ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಿರಸಿ: ಅತ್ಯುತ್ತಮ ಶಿಕ್ಷಕರ ಪಟ್ಟಿ ಪ್ರಕಟ

Published : 4 ಸೆಪ್ಟೆಂಬರ್ 2024, 13:40 IST
Last Updated : 4 ಸೆಪ್ಟೆಂಬರ್ 2024, 13:40 IST
ಫಾಲೋ ಮಾಡಿ
Comments

ಶಿರಸಿ: 2024-25ನೇ ಸಾಲಿಗೆ ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ವತಿಯಿಂದ ನೀಡಲಾಗುವ ಶಿರಸಿ ಶೈಕ್ಷಣಿಕ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದ್ದು, ಸೆ.5 ಶಿಕ್ಷಕರ ದಿನಾಚರಣೆಯಂದು ನಗರದ ಅಂಬೇಡ್ಕರ್ ಭವನದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಡಿಡಿಪಿಐ ಪಿ. ಬಸವರಾಜ ತಿಳಿಸಿದ್ದಾರೆ.

ಪ್ರೌಢಶಾಲಾ ವಿಭಾಗದಲ್ಲಿ ಶಿರಸಿ ತಾಲ್ಲೂಕಿನ ಹುಲೇಕಲ್ ಶ್ರೀದೇವಿ ಪ್ರೌಢಶಾಲೆ ಜಿ.ಯು.ಹೆಗಡೆ, ಸಿದ್ದಾಪುರ ಬಿಳಗಿ ಸೀತಾರಾಮಚಂದ್ರ ಫ್ರೌಢಶಾಲೆಯ ವಿನೋದಾ ಭಟ್, ಯಲ್ಲಾಪುರ ಕಾಳಮ್ಮನಗರದ ನಾರಾಯಣ ಆರ್ ನಾಯಕ , ಮುಂಡಗೋಡ ಮಳಗಿ ಕೆಪಿಎಸ್ ನ ಪೂರ್ಣಿಮಾ ಗೌಡ, ಹಳಿಯಾಳ ಸಾತ್ನಳ್ಳಿ ಪ್ರೌಢಶಾಲೆಯ ಶ್ರೀಶೈಲ ಹುಲ್ಲೆನ್ನವರ್ ಹಾಗೂ ಜೊಯಿಡಾ ಜಗಲಬೇಟ್ ಶಾಲೆಯ ಗೀರಿಶ ಕೋಟೇಮನೆ ಅವರಿಗೆ ಲಭಿಸಿದೆ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿರಸಿ ತಾಲ್ಲೂಕಿನ ನೈಗಾರ್ ಶಾಲೆಯ ಸುರೇಶ್ ಕೃಷ್ಣಪ್ಪ ನಾಯ್ಕ, ಸಿದ್ದಾಪುರ ಹುಲ್ಕುತ್ರಿ ಶಾಲೆಯ ದರ್ಶನ್ ಹರಿಕಾಂತ‌, ಯಲ್ಲಾಪುರ ಇಂಡಗುಂದಿ ಶಾಲೆಯ ರಾಮಚಂದ್ರ ನಾರಾಯಣ ಗೌಡ, ಮುಂಡಗೋಡ ನ್ಯಾಸರ್ಗಿ ಶಾಲೆಯ ಸಿದ್ದಲಿಂಗಪ್ಪ ಹೊಸಮನಿ, ಹಳಿಯಾಳ ಸಾತ್ನಳ್ಳಿ ಶಾಲೆಯ ಪುಂಡಲೀಕ ಸುನಕಾರ್ ಹಾಗೂ ಜೊಯಿಡಾ ಗೌಡಸಾಡ ಶಾಲೆಯ ಯಮನಪ್ಪ ಹರಿಜನ ಅವರಿಗೆ ಲಭಿಸಿದೆ.

ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶಿರಸಿ ತಾಲ್ಲೂಕಿನ  ಹೆಬ್ಬಳ್ಳಿ ಶಾಲೆಯ ರಮಾ ಗೋವಿಂದ ನಾಯ್ಕ, ಸಿದ್ದಾಪುರ ಕೋಡ್ತಗಣಿ ಶಾಲೆಯ ಅನುರಾಧ ಮಡಿವಾಳರ್, ಯಲ್ಲಾಪುರ ಗೌಳಿವಾಡದ ಬೈಲಂದೂರ್ ಶಾಲೆಯ ನಾರಾಯಣ ಗಣಪತಿ ಕಾಂಬಳೆ, ಮುಂಡಗೋಡ ಕಲಕೊಪ್ಪ ಶಾಲೆಯ ಅಶ್ವಿನಿ ಚಿದಂಬರ ಹೆಗಡೆ, ಹಳಿಯಾಳ ಅರ್ಲವಾಡ ನವಗ್ರಾಮ ಶಾಲೆಯ ವಿಶ್ವನಾಥ ಡಿ. ಹಾಗೂ ಜೊಯಿಡಾ ಕಾಮಶೇತವಾಡ ಶಾಲೆಯ ವಿಮಲಾ ಆರ್ ನಾಯ್ಕ ಅವರಿಗೆ ಜಿಲ್ಲೆಯ ಅತ್ಯುತ್ತಮ ಪ್ರಶಸ್ತಿ ಪ್ರಕಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT