ಶಿರಸಿ: ತಾಲ್ಲೂಕಿನ ಹಲವೆಡೆ ವಿದ್ಯುತ್ ಮೀಟರ್ ಅಳವಡಿಕೆ ಸಂದರ್ಭದಲ್ಲಿ ಫೀಡರ್ ಮೂಲಕ ಬಂದಿರುವ ವೈರ್ ಮತ್ತು ಮನೆ ಬಳಕೆ ವೈರ್ಗಳನ್ನು ಕಾಪರ್ ಬದಲು ಅಲ್ಯುಮಿನಿಯಂ ವೈರ್ ಬಳಸಿ ಜೋಡಣೆ ಮಾಡಲಾಗಿದೆ. ಇದರಿಂದ ಹೆಚ್ಚಿನ ವೋಲ್ವೇಜ್ ಬಳಕೆಯಾದ ವೇಳೆ ಮನೆಯಲ್ಲಿನ ವಿದ್ಯುತ್ ಚಾಲಿತ ಉಪಕರಣಗಳು ಹಾಳಾಗುತ್ತಿವೆ ಎಂಬ ದೂರು ವ್ಯಾಪಕವಾಗಿದೆ.

ಮುಂಗಾರು ಪೂರ್ವ ಮಳೆ ಆರಂಭವಾಗುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ವಿದ್ಯುತ್ ಪೂರೈಕೆಯಲ್ಲಿನ ಸಮಸ್ಯೆ ಹೆಚ್ಚುತ್ತಿದೆ. ಮೊದಲ ಮಳೆಗೆ ಸಣ್ಣಪುಟ್ಟ ತಾಂತ್ರಿಕ ದೋಷಗಳಿದ್ದ ಪರಿವರ್ತಕ ಸೇರಿ ಅನೇಕ ಉಪಕರಣಗಳು ಹಾಳಾಗಿವೆ. ಇದರ ಜತೆಗೆ ಗ್ರಾಹಕರ ಮನೆಗಳಿಗೆ ಅಳವಡಿಸಿರುವ ಮೀಟರ್ನಲ್ಲಿನ ಲೋಪದಿಂದ ಗ್ರಾಹಕರು ತೊಂದರೆಗೆ ಸಿಲುಕುವಂತಾಗಿದೆ.

ಹೆಸ್ಕಾಂನಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ವಿವಿಧ ಯೋಜನೆಗಳಡಿ ಉಪಪ್ರಸರಣ, ವಿತರಣಾ ಮಾರ್ಗ ಬಲಪಡಿಸುವಿಕೆ, ಫೀಡರ್ ಸೆಗ್ರಿಗೇಷನ್, ಮೀಟರಿಂಗ್, ಗ್ರಾಮೀಣ ವಿದ್ಯುದ್ದೀಕರಣ ಮುಂತಾದ ಕಾರ್ಯಗಳು ನಡೆದಿವೆ. ವಿದ್ಯುತ್ ಬಳಕೆ ಮಾಪನಕ್ಕೆ ತೊಂದರೆಯಾಗುತ್ತಿದ್ದ ಮೀಟರ್ಗಳನ್ನು ಈ ಯೋಜನೆಗಳಡಿ ಕಣ್ಣಿಗೆ ಕಾಣಿಸುವ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಮರದ ಹಲಗೆಯ ಮೇಲಿದ್ದ ಮೀಟರ್ಗಳನ್ನು ಕಬ್ಬಿಣದ ಬಾಕ್ಸ್ಗಳಿಗೆ ಸೇರಿಸಲಾಗಿದೆ. ಹೆಸ್ಕಾಂ ಕೆಲವು ಸಿಬ್ಬಂದಿ ಮಾಡಿದ ಎಡವಟ್ಟುಗಳಿಂದ ವಿದ್ಯುತ್ ಅವಘಡ, ಶಾರ್ಟ್ ಸರ್ಕಿಟ್ ಭಯ ಗ್ರಾಹಕರನ್ನು ಆವರಿಸಿದೆ.

‘ಅಲ್ಯೂಮಿನಿಯಂ, ಕಾಪರ್ ವೈರ್ಗಳನ್ನು ಅವೈಜ್ಞಾನಿಕವಾಗಿ ಜೋಡಿಸಿದ್ದು ಮಳೆ ಬೀಳುವ ಸಂದರ್ಭ ಹಾಗೂ ಶೀತ ವಾತಾವರಣಕ್ಕೆ ಸಡಿಲ ಸಂಪರ್ಕ ಆಗುತ್ತಿದೆ. ಈ ಎರಡು ಬಗೆಯ ವೈರ್ ಗುಣ ಮತ್ತು ಸ್ವಭಾವದಿಂದ ಹೊಂದಿಕೆಯಾಗುವುದಿಲ್ಲ. ಇದರಿಂದ ಕಬ್ಬಿಣದ ಬಾಕ್ಸ್ಗಳಿಗೂ ವಿದ್ಯುತ್ ತಗುಲುವಂತಿದ್ದು, ಮೀಟರ್ಗೆ ಬೆಂಕಿ ತಗುಲಿ ಹಾನಿಗೀಡಾಗುತ್ತಿದೆ. ಹೆಚ್ಚಿನ ವೋಲ್ವೇಜ್ ಬಳಕೆಯಾದ ವೇಳೆ ಮನೆಯಲ್ಲಿರುವ ವಿದ್ಯುತ್ ಚಾಲಿತ ಉಪಕರಣಗಳು ಹಾಳಾಗುತ್ತಿವೆ’ ಎಂದು ನಾರಾಯಣಗುರುನಗರದ ಗುರುದತ್ತ ಎಂಬುವವರು ದೂರುತ್ತಾರೆ.

‘ತಾಂತ್ರಿಕ ಕಾರಣದಿಂದ ಮೀಟರ್ಗಳು ಹೆಚ್ಚು ಕಾಲ ಬಾಳಿಕೆ ಬರುತ್ತಿಲ್ಲ. ಈ ಕುರಿತು ಹೆಸ್ಕಾಂಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಬಳಕೆದಾರರಿಗೆ ಲೋಪದ ಮಾಹಿತಿ ಇಲ್ಲದಿರುವುದರಿಂದ ಅನಾಹುತ ಹೆಚ್ಚುತ್ತಿದೆ’ ಎನ್ನುತ್ತಾರೆ ಅವರು.

‘ಆಧುನಿಕ ಮಾದರಿಯ ವೈಜ್ಞಾನಿಕ ಉಪಕರಣಗಳು ಸರಬರಾಜು ಆಗುತ್ತಿಲ್ಲ. ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚಿದ್ದು, ಇರುವ ವ್ಯವಸ್ಥೆಯಲ್ಲೇ ಕೆಲಸ ಮಾಡಿ ಮುಗಿಸುವ ಅನಿವಾರ್ಯತೆ ಇದೆ. ಮೇಲಧಿಕಾರಿಗಳ ವಿಳಂಬ ಧೋರಣೆ ಪರಿಣಾಮ ಉಪಕರಣ ಪೂರೈಕೆ ಸರಿಯಾಗಿ ನಡೆಯುತ್ತಿಲ್ಲ’ ಎಂದು ಹೆಸರು ಹೇಳಲು ಇಚ್ಛಿಸದ ಹೆಸ್ಕಾಂ ಸಿಬ್ಬಂದಿಯೊಬ್ಬರು ತಿಳಿಸಿದರು.

‘ಕೆಲವು ವರ್ಷಗಳಿಂದೀಚೆಗೆ ಕಾಪರ್ ವೈರ್ಗಳ ದರ ತೀವ್ರ ಏರಿಕೆಯಾಗಿದೆ. ಆಗಿಂದಲೂ ಅಲ್ಯುಮಿನಿಯಂ ವೈರ್ ಬಳಕೆಗೆ ಸೂಚನೆ ನೀಡಲಾಗಿದೆ. ಕಚೇರಿಯ ಸೂಚನೆ ಮೇರೆಗೆ ಅಲ್ಯುಮಿನಿಯಂ ವೈರ್ ಬಳಸಲಾಗುತ್ತಿದೆ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.