ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಮಂಜುನಾಥ ನಾಯಕ ಆಯ್ಕೆ

Published 14 ಆಗಸ್ಟ್ 2023, 13:23 IST
Last Updated 14 ಆಗಸ್ಟ್ 2023, 13:23 IST
ಅಕ್ಷರ ಗಾತ್ರ

ಶಿರಸಿ: ಇಲ್ಲಿನ ಉಪ ಕಾರಾಗೃಹದಲ್ಲಿ ಪ್ರಭಾರಿ ಜೈಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೂಲತಃ ಅಂಕೋಲಾ ಅಗ್ಗರಗೋಣದ ಮಂಜುನಾಥ ನಾಯಕ ಅವರಿಗೆ ಮುಖ್ಯಮಂತ್ರಿ ಬಂಗಾರದ ಪದಕಕ್ಕೆ ಆಯ್ಕೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕಾರಾಗೃಹ ಇಲಾಖೆಗೆ ಬಂದ ಪ್ರಥಮ ಮುಖ್ಯಮಂತ್ರಿ ಪದಕ ಇದಾಗಿದ್ದು, ಆಗಸ್ಟ್ 15ರಂದು ಕೇಂದ್ರ ಕಾರಾಗೃಹ ಬೆಳಗಾವಿಯಲ್ಲಿ ಪದಕ ನೀಡಲಾಗುವುದು. ಅಗ್ಗರಗೋಣದ ಶಿಕ್ಷಕ ದಂಪತಿ ವೆಂಕಟ್ರಮಣ ಬೀರಣ್ಣ ನಾಯಕ ಹಾಗೂ ಬೀರಮ್ಮ ನಾಯಕ ಪುತ್ರರಾಗಿರುವ ಮಂಜುನಾಥ ನಾಯಕ 2008ರಲ್ಲಿ ಜಿಲ್ಲಾ ಕಾರಾಗೃಹ ಮಂಗಳೂರನಿಂದ ಕೆಲಸ ಪ್ರಾರಂಭಿಸಿದ್ದರು. ಇವರು ನಂತರ ಉಪ ಕಾರಾಗೃಹ ಯಲ್ಲಾಪುರ ಮತ್ತು ಜಿಲ್ಲಾ ಕಾರಾಗೃಹ ಕಾರವಾರದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಉಪ ಕಾರಾಗೃಹ ಶಿರಸಿಯಲ್ಲಿ ಪ್ರಭಾರಿ ಜೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT