ಕೆಂಗ್ರೆ ಹಾಗೂ ಮಾರಿಗದ್ದೆ ಜಾಕ್ ವೆಲ್ ಬಳಿ ತಾತ್ಕಾಲಿಕ ಒಡ್ಡು ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ
ಪ್ರಕಾಶ ಚನ್ನಪ್ಪನವರ ಪೌರಾಯುಕ್ತ
ಶುದ್ಧೀಕರಣ ಅನಿವಾರ್ಯ
‘ತಾತ್ಕಾಲಿಕ ಒಡ್ಡುಗಳನ್ನು ನಿರ್ಮಿಸಿ ನೀರು ಸಂಗ್ರಹಿಸಿದರೆ ಸಾಲದು ಸಂಗ್ರಹವಾಗುವ ನೀರು ಕುಡಿಯಲು ಯೋಗ್ಯವಾಗಿರುವಂತೆ ನೋಡಿಕೊಳ್ಳಬೇಕು. ಕೆಂಗ್ರೆ ಹಳ್ಳ ಮತ್ತು ಮಾರಿಗದ್ದೆ ಜಾಕ್ ವೆಲ್‌ಗಳ ಸುತ್ತಮುತ್ತ ಶೇಖರಣೆಯಾಗಿರುವ ಹೂಳು ಪಾಚಿ ಮತ್ತು ಕಸಕಡ್ಡಿಗಳನ್ನು ತೆರವುಗೊಳಿಸಬೇಕು. ಜಾತ್ರೆಯ ಅವಧಿಯಲ್ಲಿ ಜನದಟ್ಟಣೆ ಹೆಚ್ಚಿರುವುದರಿಂದ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ನೀರಿನ ಮೂಲ ಜಲಸಂಗ್ರಹಾಗಾರಗಳ ಶುದ್ಧೀಕರಣಕ್ಕೂ ನಗರಸಭೆ ಆದ್ಯತೆ ನೀಡಲೇಬೇಕು’ ಎಂಬುದು ಜನರ ಒತ್ತಾಯ.