ಶಿರಸಿ: ಬೇಸಿಗೆಯಲ್ಲಿ ಮಂಕಾಗಿದ್ದ ತಾಲ್ಲೂಕಿನ ಮುರೇಗಾರ ಜಲಪಾತ ಮಳೆ ಆರಂಭದೊಂದಿಗೆ ಜೀವಕಳೆ ಪಡೆದಿದೆ. ಆದರೆ ಜಲಪಾತ ವೀಕ್ಷಣೆಗೆ ಹೋಗುವ ಪ್ರವಾಸಿಗರಿಗೆ ಇಲ್ಲಿಗೆ ತೆರಳುವ ರಸ್ತೆ ಭಯ ಹುಟ್ಟಿಸುವಂತಿದೆ.

ತಾಲ್ಲೂಕು ಕೇಂದ್ರದಿಂದ ಹುಲೇಕಲ್ ರಸ್ತೆ ಮಾರ್ಗವಾಗಿ ಸಾಲ್ಕಣಿವರೆಗೆ ಸುಲಭವಾಗಿ ಪ್ರಯಾಣಿಸಿ 30 ನಿಮಿಷಗಳಲ್ಲಿ ಮುರೇಗಾರ ಕ್ರಾಸ್ ಮೂಲಕ ದುಗ್ಗುಮನೆವರೆಗೆ ತಲುಪಬಹುದು. ಆದರೆ ಅಲ್ಲಿಂದ ಮುಂದೆ ಜಲಪಾತದವರೆಗೆ 2.5 ಕಿ.ಮೀ ದೂರ ಕ್ರಮಿಸಲು ವಾಹನ ಚಾಲಕರು ಹರಸಾಹಸ ಪಡಬೇಕಾದ ಸ್ಥಿತಿ ಇದೆ. ಈಚೆಗೆ ಬಿದ್ದ ಮಳೆಯಿಂದ ಇಡೀ ರಸ್ತೆ ಕೆಸರು ಗದ್ದೆಯಂತಾಗಿದೆ.

‘ಮುರೇಗಾರ ಫಾಲ್ಸ್ಗೆ ಪ್ರತಿವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ, ಬಹಳ ವರ್ಷಗಳಿಂದ ಈ ರಸ್ತೆ ಅಭಿವೃದ್ಧಿ ಪಡಿಸುವಂತೆ ಜನಪ್ರತಿನಿಧಿಗಳನ್ನು ವಿನಂತಿಸಲಾಗಿದೆ. ಆದರೆ ಯಫಡಿಮಠ ಸರ್ಕಲ್ನಿಂದ ದುಗ್ಗುಮನೆವರೆಗೆ ಮಾತ್ರ ಮೂರು ವರ್ಷಗಳ ಹಿಂದೆ ರಸ್ತೆ ಮಾಡಲಾಗಿದೆ. ಉಳಿದ ರಸ್ತೆ ಯಥಾಸ್ಥಿತಿಯಲ್ಲಿದೆ. ಮಳೆಗಾಲದಲ್ಲಿ ಜಲಪಾತದ ಸೌಂದರ್ಯ ನೋಡಲು ಬರುವ ಅನೇಕರು ರಸ್ತೆಯ ದುಃಸ್ಥಿತಿ ಕಂಡು ಮರುಗುತ್ತಾರೆ’ ಎನ್ನುತ್ತಾರೆ ಸ್ಥಳೀಯರಾದ ಸಂತೋಷ ಹೆಗಡೆ.

‘ಮುಂಗಾರುಪೂರ್ವ ಮಳೆಗೆ ಮುರೇಗಾರ ಜಲಪಾತ ಸಾಗುವ ರಸ್ತೆ ಕೆಸರಿನ ಗುಂಡಿಯಾಗಿ ಮಾರ್ಪಟ್ಟಿದೆ. ಸರ್ಕಸ್ ಮಾಡಿ ಈ ಮಾರ್ಗದಲ್ಲಿ ಹೊರಟರೆ ಅರ್ಧ ದಾರಿಯಲ್ಲಿ ಸಿಕ್ಕಿಕೊಳ್ಳುವುದು ನಿಶ್ಚಿತ. ರಾಜ್ಯದ ವಿವಿಧ ಕಡೆಗಳಿಂದ ಈ ಜಲಪಾತ ನೋಡಲೆಂದು ಬರುವ ಪ್ರವಾಸಿಗರು ರಸ್ತೆ ನೋಡಿ ವಾಪಸ್ ಮರಳುತ್ತಿದ್ದಾರೆ. ಹಲವರು ಬೈಕ್ ಮೇಲೆ ಸಾಹಸ ಮಾಡಲು ಹೋಗಿ ಜಲಪಾತವರೆಗೂ ತಲುಪಲಾಗದೆ ಅರ್ಧಕ್ಕೆ ವಾಪಸ್ಸಾಗುತ್ತಾರೆ. ಇನ್ನು ಮಳೆ ಆರಂಭವಾದರೆ ಈ ರಸ್ತೆ ಸಂಚಾರ ಮತ್ತಷ್ಟು ಕಷ್ಟವಾಗಲಿದೆ’ ಎಂದು ಸ್ಥಳೀಯರು ದೂರಿದರು.

‘ಈ ಹಿಂದೆ ಪ್ರವಾಸಿ ತಾಣಗಳ ಜೋಡಣೆ ಮಾರ್ಗಕ್ಕೆ ಪ್ರಸ್ತಾವ ಸಲ್ಲಿಕೆಯಾಗಿತ್ತು. ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಅನುಮೋದನೆ ಯಾವ ಹಂತದಲ್ಲಿದೆ ಪರಿಶೀಲಿಸಬೇಕು’ ಎಂದು ಹೆಸರು ಹೇಳಲಿಚ್ಛಿಸದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ತಿಳಿಸಿದರು.

‘ಭರವಸೆಯಲ್ಲೇ ಕಾಲ ಹರಣ’

‘ಮುರೇಗಾರ ಜಲಪಾತದ ಮಾರ್ಗವನ್ನು ಸರ್ವಋತು ರಸ್ತೆ ಮಾಡಲು ₹1 ಕೋಟಿಗೂ ಅಧಿಕ ಅನುದಾನ ಬೇಕು. ಜಿಲ್ಲಾ ಪಂಚಾಯಿತಿಯಿಂದ ಇಷ್ಟೊಂದು ದೊಡ್ಡ ಮೊತ್ತ ಬರುವುದು ಸುಲಭವಲ್ಲ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯಿಂದ ಮುರೇಗಾರ ಜಲಪಾತದ ಸುತ್ತ ಮುತ್ತಲಿನ ಐದಾರು ಪ್ರವಾಸಿ ಕೇಂದ್ರಗಳಿಗೆ ಅನುಕೂಲವಾಗುವಂತೆ ಜೋಡಣೆ ಮಾರ್ಗ ಮಾಡಿದರೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಮುರೇಗಾರ ಜಲಪಾತ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಿ ಪ್ರವಾಸೋದ್ಯಮ ಇಲಾಖೆಗೆ ಈ ಹಿಂದೆ ಪ್ರಸ್ತಾವ ಸಲ್ಲಿಸಲಾಗಿತ್ತಾದರೂ ಈವರೆಗೆ ರಸ್ತೆ ನಿರ್ಮಾಣ ಸಾಧ್ಯವಾಗಿಲ್ಲ. ಅನುದಾನ ನೀಡುವುದಾಗಿ ಹೇಳುತ್ತ ಕಾಲ ಕಳೆಯಲಾಗುತ್ತಿದೆ. ಈ ರಸ್ತೆ ದುರವಸ್ಥೆಯಿಂದಾಗಿ ಜಲಪಾತಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ’ ಎಂದು ಸ್ಥಳೀಯ ನಿವಾಸಿ ಗಣೇಶ ಹೆಗಡೆ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.