ಕಾರವಾರ: ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಸಾಮಾಜಿಕ ಮಾಧ್ಯಮಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಣ್ಗಾವಲು ಇಡುತ್ತಿರುವ ಪೊಲೀಸ್ ಇಲಾಖೆಯ ಪ್ರತ್ಯೇಕ ವಿಭಾಗ, ಸುಳ್ಳು ಸುದ್ದಿ, ಅವಹೇಳನಕಾರಿ ಪೋಸ್ಟ್ ಹಂಚಿಕೊಂಡಿದ್ದಕ್ಕೆ ಸಂಬಂಧಿಸಿದ ಎರಡೂವರೆ ವರ್ಷದಲ್ಲಿ 77 ಪ್ರಕರಣ ದಾಖಲಿಸಿದೆ.

ವರ್ಷದಿಂದ ವರ್ಷಕ್ಕೆ ಸಾಮಾಜಿಕ ಜಾಲತಾಣ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಐದು ತಿಂಗಳ ಅವಧಿಯಲ್ಲೇ 18 ಪ್ರಕರಣಗಳು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮನಬಂದಂತೆ ಟೀಕಿಸುವ, ವೈಯಕ್ತಿಕ ತೇಜೋವಧೆಗಾಗಿ ಚಿತ್ರ ಮತ್ತು ಬರಹ ಹರಿಬಿಡುವ, ರಾಷ್ಟ್ರ ನಾಯಕರು, ಜನಪ್ರತಿನಿಧಿಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ, ಕೋಮು ಸೌಹಾರ್ದ ಕೆಡಿಸಲು, ಶಾಂತಿ ಕದಡಲು ಕಾರಣವಾಗಬಹುದಾದ ಪೋಸ್ಟ್ ಹಂಚಿಕೊಳ್ಳುವವರ ಮೇಲೆ ನಿತ್ಯವೂ ನಿಗಾ ಇರಿಸಲಾಗುತ್ತಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಗಾವಲು ಇಡಲು ಪ್ರತ್ಯೇಕ ವಿಭಾಗವನ್ನು ಕಳೆದ ಎರಡೂವರೆ ವರ್ಷದ ಹಿಂದೆ ಆರಂಭಿಸಲಾಗಿದೆ. ಅಲ್ಲಿ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ನಾಲ್ವರು ಸಿಬ್ಬಂದಿ ಸಾಮಾಜಿಕ ಮಾಧ್ಯಮಗಳಾದ ಫೇಸ್ಬುಕ್, ಎಕ್ಸ್, ಇನ್ಸ್ಟಾಗ್ರಾಮ್, ಟೆಲಿಗ್ರಾಮ್, ವಾಟ್ಸಾಪ್ ಸೇರಿದಂತೆ ಇನ್ನಿತರ ಜಾಲತಾಣಗಳ ಪೋಸ್ಟ್ಗಳ ಮೇಲೆ ನಿಗಾ ಇರಿಸುವ ಕೆಲಸ ನಡೆಸುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ದುರ್ಬಳಕೆ ನಡೆಸಿದ್ದು ಪತ್ತೆಯಾದರೆ ತಕ್ಷಣ ಆಯಾ ಠಾಣೆಯ ಪೊಲೀಸರಿಗೆ ಮಾಹಿತಿ ರವಾನಿಸಿ, ಅಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಸೂಚನೆ ನೀಡಲಾಗುತ್ತಿದೆ.

‘ಜಿಲ್ಲೆಯಲ್ಲಿರುವ ಎಲ್ಲ 30 ಪೊಲೀಸ್ ಠಾಣೆಗಳಲ್ಲಿಯೂ ತಲಾ ಇಬ್ಬರು ಸಿಬ್ಬಂದಿಗೆ ಠಾಣೆಯ ವ್ಯಾಪ್ತಿಯಲ್ಲಿ ಸಾಮಾಜಿಕ ಮಾಧ್ಯಮಗಳು, ಅನಧಿಕೃತ ವೆಬ್ಸೈಟ್ಗಳಲ್ಲಿ ಬರುವ ನಕಲಿ ಸುದ್ದಿಗಳ ಮೇಲೆ ನಿಗಾ ಇರಿಸಲು ಜವಾಬ್ದಾರಿ ನೀಡಲಾಗಿದೆ. ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನದಿಂದ ಮಾಡುವ ಪೋಸ್ಟ್ಗಳು, ಪ್ರಚೋದನಕಾರಿ ಭಾಷಣಗಳ ತುಣುಕುಗಳನ್ನು ಹರಿಬಿಡುವವರ ಮೇಲೆ ಹೆಚ್ಚು ನಿಗಾ ಇರಿಸಲು ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸುಳ್ಳು ಸುದ್ದಿಗಳನ್ನು ಹರಿಬಿಡುವುದರಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಅನಧಿಕೃತ ವೆಬ್ಸೈಟ್ಗಳಲ್ಲಿ ಬರುವ ಊಹಾಪೋಹದ ಸಂಗತಿ ಆಧರಿಸಿದ ಸುದ್ದಿಗಳನ್ನು ಹರಿಬಿಡುವವರ ಮೇಲೂ ಕಣ್ಗಾವಲು ಇಟ್ಟಿದ್ದೇವೆ. ಸಮಾಜದ ದಾರಿ ತಪ್ಪಿಸುವ ಪ್ರಯತ್ನ ನಡೆದರೆ ಅಂತಹವರ ಮೇಲೂ ಪ್ರಕರಣ ದಾಖಲಿಸಲಾಗುತ್ತಿದೆ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.