ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | 5ನೇ ಸ್ಥಾನಕ್ಕೆ ಜಿಗಿದ ಉತ್ತರ ಕನ್ನಡ: ಬಾಲಕಿಯರದ್ದೇ ಮೇಲುಗೈ

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಬಾಲಕಿಯರದ್ದೇ ಮೇಲುಗೈ
Published 9 ಮೇ 2024, 13:35 IST
Last Updated 9 ಮೇ 2024, 13:35 IST
ಅಕ್ಷರ ಗಾತ್ರ

ಕಾರವಾರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ ಶೇ 86.54 ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ ಐದನೇ ಸ್ಥಾನದಲ್ಲಿದೆ. ಕಳೆದ ಬಾರಿ 13ನೇ ಸ್ಥಾನದಲ್ಲಿದ್ದ ಜಿಲ್ಲೆ ಈ ಬಾರಿ ಎಂಟು ಸ್ಥಾನ ಏರಿಕೆ ಕಂಡಿದೆ.

ಜಿಲ್ಲೆಯ 200 ಪ್ರೌಢಶಾಲೆಗಳ ಪೈಕಿ 57 ಪ್ರೌಢಶಾಲೆಗಳು ಪ್ರತಿಶತ ಅಂಕ ಸಾಧನೆ ಮಾಡಿವೆ. ಈ ಪೈಕಿ 21 ಸರ್ಕಾರಿ, 7 ಅನುದಾನಿತ ಮತ್ತು 29 ಅನುದಾನ ರಹಿತ ಪ್ರೌಢಶಾಲೆಗಳು ಸೇರಿವೆ.

ಜಿಲ್ಲೆಯಲ್ಲಿ 5,066 ಬಾಲಕರು, 4,843 ಬಾಲಕಿಯರು ಸೇರಿದಂತೆ 9,909 ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 4,076 ಬಾಲಕರು ಮತ್ತು 4,499 ಬಾಲಕಿಯರು ಸೇರಿ ಒಟ್ಟು 8,575 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ 92.90ರಷ್ಟು ಫಲಿತಾಂಶ ದಾಖಲಿಸಿದ್ದಾರೆ. ಬಾಲಕರ ಫಲಿತಾಂಶ ಶೇ 80.46 ಆಗಿದೆ.

ಮೊದಲ ಸ್ಥಾನ ಕಾಯ್ದುಕೊಂಡ ಹೊನ್ನಾವರ:

ಪರೀಕ್ಷೆ ಫಲಿತಾಂಶದಲ್ಲಿ ಶೇ 96.42ರ ಸಾಧನೆ ಮೆರೆದಿರುವ ಹೊನ್ನಾವರ ತಾಲ್ಲೂಕು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚು ಫಲಿತಾಂಶ ಸಾಧಿಸಿದೆ. ಈ ಮೂಲಕ ಕಳೆದ ವರ್ಷವೂ ಗಳಿಸಿದ್ದ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ. ಭಟ್ಕಳ 95.28 ಫಲಿತಾಂಶದೊಂದಿಗೆ ಎರಡನೇ ಸ್ಥಾನದಲ್ಲಿದೆ. ಕುಮಟಾ ಶೇ 93.07, ಅಂಕೋಲಾ ಶೇ 85.18, ಕಾರವಾರ ಶೇ 79.42 ರಷ್ಟು ಫಲಿತಾಂಶ ದಾಖಲಿಸಿವೆ.

ಸರ್ಕಾರಿ ಶಾಲೆಗಳ ಸಾಧನೆ

59 ಸರ್ಕಾರಿ ಶಾಲೆಗಳಿಂದ ಶೇ 93.58 ರಷ್ಟು ಫಲಿತಾಂಶ ದಾಖಲಾಗಿದ್ದರೆ, ಅನುದಾನಿತ ಶಾಲೆಗಳು ಶೇ 84.95 ಮತ್ತು ಅನುದಾನ ರಹಿತ ಶಾಲೆಗಳು ಶೇ 96.09 ಫಲಿತಾಂಶ ದಾಖಲಿಸಿವೆ.

ರ‍್ಯಾಂಕ್ ಗಳಿಸಿದವರು:

ಕನ್ನಡ ಮಾಧ್ಯಮದಲ್ಲಿ ಭಟ್ಕಳ ತಾಲ್ಲೂಕಿನ ಬೈಲೂರಿನ ಕೆ.ಪಿ.ಎಸ್ ವಿದ್ಯಾರ್ಥಿನಿ ಭಾವನಾ ಪ್ರಭಾಕರ ನಾಯ್ಕ ಮತ್ತು ತೇರ್ನಮಕ್ಕಿ ಕೆ.ಪಿ.ಎಸ್‍ನ ಹರ್ಷನ ನಾಗಯ್ಯ ಗೊಂಡ 625ಕ್ಕೆ 618 ಅಂಕ ಗಳಿಸುವುದರೊಂದಿಗೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ.

ಇಂಗ್ಲಿಷ್ ಮಾಧ್ಯಮದಲ್ಲಿ 625ಕ್ಕೆ 621 ಅಂಕ ಗಳಿಸಿದ ಕುಮಟಾದ ಕೊಲಬಾ ವಿಠೋಬ ಶಾನಭಾಗ ಕಲಬಾಗಕರ ಪ್ರೌಢಶಾಲೆಯ ವಿದ್ಯಾರ್ಥಿ ಕಾರ್ತಿಕ್ ಏಕನಾಥ ರಾವುತಕರ ಮೊದಲ ಸ್ಥಾನ ಪಡೆದಿದ್ದಾರೆ.

ಉರ್ದು ಮಾಧ್ಯಮದಲ್ಲಿ ಹೊನ್ನಾವರ ತಾಲ್ಲೂಕು ಮಾಗೋಡದ ಶಾರದಾಂಬಾ ಪ್ರೌಢಶಾಲೆಯ ನೂರೈನ್ ಫಕ್ರುದ್ದಿನ್ ಗೈಮಾ 608 ಅಂಕ ಗಳಿಕೆಯೊಂದಿಗೆ ಮೊದಲ ಸ್ಥಾನ ಪಡೆದಿದ್ದಾರೆ.

ಅಂಕಿ–ಅಂಶ

ತಾಲ್ಲೂಕುವಾರು ಫಲಿತಾಂಶ ಮಾಹಿತಿ

ತಾಲ್ಲೂಕು;ಪರೀಕ್ಷೆಗೆ ಹಾಜರಾದವರು;ಉತ್ತೀರ್ಣರಾದವರು;ಶೇಕಡಾ ಫಲಿತಾಂಶ

ಹೊನ್ನಾವರ;1,927;1,858;96.42

ಕಾರವಾರ;1,924;1,528;79.42

ಭಟ್ಕಳ;1,993;1,899;95.28

ಕುಮಟಾ;2,106;1,960;93.07

ಅಂಕೋಲಾ;1,275;1,086;85.18

ಹಳಿಯಾಳ;2,968;2,218;74.73

ಜೊಯಿಡಾ;820;649;79.14

ಮುಂಡಗೋಡ;1,328;1,033;77.78

ಸಿದ್ದಾಪುರ;1,234;1,193;96.61

ಶಿರಸಿ;2,679;2,438;91.00

ಯಲ್ಲಾಪುರ;1,070;972;84.19

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT