ಕಾರವಾರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಅಗತ್ಯದಷ್ಟು ಸಿಬ್ಬಂದಿ ಇಲ್ಲದ ಪರಿಣಾಮ ಆಡಳಿತ ವ್ಯವಸ್ಥೆಗೆ ಜಡ್ಡುಗಟ್ಟಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಜಿಲ್ಲೆಯ 3 ನಗರಸಭೆ, 4 ಪುರಸಭೆ, 6 ಪಟ್ಟಣ ಪಂಚಾಯಿತಿ ಸೇರಿ 1,431 ಹುದ್ದೆಗಳ ಮಂಜೂರಾತಿ ಇದೆ. ಅವುಗಳ ಪೈಕಿ 563 ಕಾಯಂ ಸಿಬ್ಬಂದಿಯಷ್ಟೆ ಇದ್ದು, 868 ಹುದ್ದೆಗಳು ಖಾಲಿಯೇ ಉಳಿದಿವೆ.

ಭಟ್ಕಳ, ಮುಂಡಗೋಡ, ಯಲ್ಲಾಪುರದ ನಗರ ಸ್ಥಳೀಯ ಸಂಸ್ಥೆಗಳಿಗೆ ಕಾಯಂ ಮುಖ್ಯಾಧಿಕಾರಿಗಳಿಲ್ಲದೆ ಹಲವು ತಿಂಗಳು ಕಳೆದಿದೆ. ಪ್ರಭಾರ ಹುದ್ದೆಯಲ್ಲೇ ಇವು ನಡೆಯುತ್ತಿವೆ. ಶಿರಸಿ ನಗರಸಭೆಯ ಪೌರಾಯುಕ್ತರು ರಜೆ ಮೇಲೆ ತೆರಳಿದ್ದು, ಅಲ್ಲಿಯೂ ಬೇರೊಬ್ಬರು ತಾತ್ಕಾಲಿಕವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಮುಖವಾಗಿರುವ ಕಂದಾಯ ನಿರೀಕ್ಷಕರು, ಸಿವಿಲ್ ಕಾಮಗಾರಿಗಳ ಮೇಲುಸ್ತುವಾರಿಗೆ ಅಗತ್ಯವಿರುವ ಕಿರಿಯ ಎಂಜಿನಿಯರ್, ನಗರ ವ್ಯಾಪ್ತಿಯಲ್ಲಿ ಸ್ವಚ್ಛತೆ ಹಾಗೂ ಪರಿಸರ ಸಂಬಂಧಿತ ಚಟುವಟಿಕೆಗಳ ಮೇಲೆ ನಿಗಾ ಇರಿಸಬೇಕಾದ ಪರಿಸರ ಎಂಜಿನಿಯರ್, ಆರೋಗ್ಯ ನಿರೀಕ್ಷಕರು, ತೆರಿಗೆ ವಸೂಲಿ ಸೇರಿದಂತೆ ನಗರಾಡಳಿತದ ತಳಹಂತದ ಕೆಲಸಕಾರ್ಯಗಳಿಗೆ ಅಗತ್ಯವಿರುವ ಬಿಲ್ ಕಲೆಕ್ಟರ್ ಹುದ್ದೆಗಳು ಖಾಲಿಯೇ ಉಳಿಯುವಂತಾಗಿದೆ.

‘ಕಂದಾಯ ನಿರೀಕ್ಷಕರು, ಕಿರಿಯ ಎಜಿನಿಯರ್, ನಿರೀಕ್ಷಕರು, ಬಿಲ್ ಕಲೆಕ್ಟರ್ ಸೇರಿದಂತೆ ಸಿ ದರ್ಜೆಯ ಹುದ್ದೆಗಳಿಗೆ ಹೊರಗುತ್ತಿಗೆ ಸಿಬ್ಬಂದಿ ನಿಯೋಜನೆ ಮಾಡಲಾಗದು. ಅನ್ಯ ಸ್ಥಳೀಯ ಸಂಸ್ಥೆಗಳಲ್ಲಿರುವವರಿಗೆ ಹೆಚ್ಚುವರಿ ಜವಾಬ್ದಾರಿ ನೀಡಿ ನಿಭಾಯಿಸಬೇಕಾದ ಸ್ಥಿತಿ ಇದೆ. ಕೆಲವು ಸಿಬ್ಬಂದಿಗೆ ಜಿಲ್ಲೆಯ ಎರಡು ಅಥವಾ ಮೂರು ನಗರ ಸ್ಥಳೀಯ ಸಂಸ್ಥೆಗಳ ಹುದ್ದೆ ನಿಭಾಯಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ತ್ವರಿತ ಕೆಲಸಗಳಾಗದೆ ಸಮಸ್ಯೆಗಳು ಎದುರಾಗುತ್ತಿವೆ’ ಎಂದು ಅಧಿಕಾರಿಯೊಬ್ಬರು ಸಮಸ್ಯೆ ಹೇಳಿಕೊಂಡರು.

ಸದ್ಯ ಬಿ–ಖಾತಾ ಹಂಚಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಆದರೆ, ಅಗತ್ಯ ದಾಖಲೆಗಳನ್ನು ಪಡೆಯಲು ಕಚೇರಿಗಳಲ್ಲಿ ಸಿಬ್ಬಂದಿ ಇಲ್ಲದೆ ಸಾರ್ವಜನಿಕರು ಪರದಾಡುತ್ತಿದ್ದಾರೆ. ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಜನನ–ಮರಣ ಪ್ರಮಾಣ ಪತ್ರ, ಕಟ್ಟಡ ಪರವಾನಗಿ, ನೀರಿನ ಸಂಪರ್ಕ, ಒಳಚರಂಡಿ ಸಂಪರ್ಕ, ಹೀಗೆ ಹಲವು ಕೆಲಸಗಳಿಗೆ ನಿತ್ಯ ನೂರಾರು ಜನರು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗೆ ಬರುತ್ತಿದ್ದಾರೆ. ನಿಗದಿತ ಅವಧಿಯಲ್ಲಿ ಕೆಲಸ ಆಗದೆ ಬೇಸರದೊಂದಿಗೆ ಮರಳುತ್ತಿದ್ದಾರೆ.

‘ಕಟ್ಟಡ ನಿರ್ಮಾಣ ಪೂರ್ಣಗೊಂಡ ಬಗ್ಗೆ ನಿರಾಕ್ಷೇಪಣೆ ಪತ್ರ ಪಡೆಯಲು ನಗರಸಭೆ ಕಚೇರಿಗೆ ತೆರಳಿದರೆ ಸಿಬ್ಬಂದಿ ಇಲ್ಲದೆ ವಾರಗಟ್ಟಲೆ ಕಾಯಬೇಕಾಗಿ ಬಂತು. ಬೇರೆ ಬೇರೆ ಕೆಲಸಕ್ಕೆ ತೆರಳಿದಾಗ ಅಧಿಕಾರಿಗಳೇ ಇಲ್ಲದೆ ಹಲವು ಬಾರಿ ತೊಂದರೆ ಅನುಭವಿಸಿದ್ದೇನೆ. ವಿಚಾರಿಸಿದರೆ ಬೇರೆ ಪುರಸಭೆಯಲ್ಲೂ ಅವರಿಗೆ ಜವಾಬ್ದಾರಿ ಇದ್ದು, ಅಲ್ಲಿಗೆ ತೆರಳಿದ್ದಾಗಿ ಉತ್ತರ ಬಂದಿತ್ತು’ ಎಂದು ನಗರದ ಉದ್ಯಮಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.