ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾರವಾರ | ಪೂರೈಕೆ ಕೊರತೆ: ಒಂದು ಕಬ್ಬಿಗೆ ₹ 250

Published 24 ನವೆಂಬರ್ 2023, 15:40 IST
Last Updated 24 ನವೆಂಬರ್ 2023, 15:40 IST
ಅಕ್ಷರ ಗಾತ್ರ

ಕಾರವಾರ: ತುಳಸಿ ಹಬ್ಬದ ನಿಮಿತ್ತ ಶುಕ್ರವಾರ ನಗರದ ಮಾರುಕಟ್ಟೆಯಲ್ಲಿ ಕಬ್ಬಿನ ಹೊರೆಗೆ ಭಾರಿ ಬೇಡಿಕೆ ಇತ್ತಾದರೂ, ಅಗತ್ಯದಷ್ಟು ಪೂರೈಕೆ ಇರದ ಪರಿಣಾಮ ಬೆಲೆ ವಿಪರೀತ ಏರಿಕೆ ಕಂಡಿತು. ಮಧ್ಯಾಹ್ನದ ವೇಳೆಗೆ ಒಂದು ಕಬ್ಬಿಗೆ ₹ 250 ನೀಡಿ ಗ್ರಾಹಕರು ಕೊಂಡುಕೊಳ್ಳುವ ಸ್ಥಿತಿ ಎದುರಾಯಿತು.

ಹಬ್ಬದ ಮುನ್ನಾ ದಿನ ಮಾರುಕಟ್ಟೆಯಲ್ಲಿ 10 ರಿಂದ 12 ಕಬ್ಬುಗಳಿರುವ ಹೊರೆಯೊಂದಕ್ಕೆ ₹ 400–₹ 450 ದರವಿತ್ತು. ಹಬ್ಬದ ದಿನ ಏಕಾಏಕಿ ಬೇಡಿಕೆ ಹೆಚ್ಚಿತು. ಆದರೆ ಮಾರುಕಟ್ಟೆಯಲ್ಲಿ ಅಗತ್ಯ ಪ್ರಮಾಣದಷ್ಟು ಕಬ್ಬು ದಾಸ್ತಾನು ಇರಲಿಲ್ಲ. ಆದರೆ ಆಚರಣೆಗೆ ಅಗತ್ಯವಿರುವ ಕಾರಣ ಗ್ರಾಹಕರು ಕಬ್ಬು ಖರೀದಿಗೆ ಮುಗಿಬಿದ್ದಿದ್ದರು.

‘ವ್ಯಾಪಾರಿಗಳು ಕಬ್ಬಿನ ಹೊರೆಯ ಕೊರತೆ ಸೃಷ್ಟಿಸಿ ದರ ಹೆಚ್ಚಿಸಿದ್ದಾರೆ. ಹೊರೆಯೊಂದಕ್ಕೆ ₹ 1 ಸಾವಿರದಿಂದ ₹ 3 ಸಾವಿರಕ್ಕೆ ಬೇಡಿಕೆ ಇಟ್ಟವರೂ ಇದ್ದಾರೆ. ಇದರಿಂದ ಸಾಮಾನ್ಯ ಜನರು ಕಬ್ಬು ಖರೀದಿಸಲಾಗದೇ ಬರಿಗೈಲಿ ಮರಳುವ ಸ್ಥಿತಿಯೂ ಉಂಟಾಯಿತು’ ಎಂದು ಆಶ್ರಮ ರಸ್ತೆಯ ನಿವಾಸಿ ಪ್ರಸಾದ ಕಾಮತ್ ಹೇಳಿದರು.

ಗ್ರಾಹಕರ ಪರದಾಟ ಗಮನಿಸಿದ ಕೆಲ ಸ್ಥಳೀಯ ವ್ಯಾಪಾರಿಗಳು ಸಂಜೆಯ ವೇಳೆಗೆ ಎರಡು ಲೋಡ್‍ಗಳಷ್ಟು ಕಬ್ಬು ತರಿಸಿ ಹೊರೆಯೊಂದಕ್ಕೆ ₹ 250ಕ್ಕೆ ಮಾರಾಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT