ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಉಜ್ವಲ ಭವಿಷ್ಯಕ್ಕೆ ಶಿಕ್ಷಣ ಅಗತ್ಯ: ಶಿವಾನಂದ ನಾಯಕ

Published : 10 ಸೆಪ್ಟೆಂಬರ್ 2024, 13:53 IST
Last Updated : 10 ಸೆಪ್ಟೆಂಬರ್ 2024, 13:53 IST
ಫಾಲೋ ಮಾಡಿ
Comments

ಅಂಕೋಲಾ: ‘ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಿಕ್ಷಣ ಅಮೂಲ್ಯ ಸಂಪತ್ತು. ಅಂತಹ ಸಂಪತ್ತಿನ ಗಳಿಕೆಯೇ ವಿದ್ಯಾರ್ಥಿ ಜೀವನದ ಧ್ಯೇಯವಾಗಿರಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸಮಿತಿ ಸದಸ್ಯ ಶಿವಾನಂದ ನಾಯಕ ಹೇಳಿದರು.

ಪಟ್ಟಣದ ಪಿ.ಎಂ.ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಯೂನಿಯನ್ ಜಿಮಖಾನಾ ಹಾಗೂ ಶಿಕ್ಷಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕುಮಟಾದ ನಿವೃತ್ತ ಯೋಧ ಮಂಜುನಾಥ ಪಟಗಾರ, ‘ವಿದ್ಯಾರ್ಥಿ ಜೀವನದಲ್ಲಿಯೇ ಭವಿಷ್ಯದ ಬದುಕಿನ ಗುರಿ ಇಲ್ಲದಿದ್ದರೆ ಕಲಿಕೆ ವ್ಯರ್ಥ. ಯೋಧನಾಗಿ ದೇಶ ಸೇವೆಗೆ ಆಯ್ಕೆಯಾದ ಸಂದರ್ಭ ಮತ್ತು ಅದರಿಂದಲೇ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳ ಭಾಷೆ, ಸಂಸ್ಕೃತಿಯ ಅರಿವಿನ ಅನುಭವ ಪಡೆಯಲು ಸಾಧ್ಯವಾಯಿತು’ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಸಂತ ಕೆ.ನಾಯ್ಕ ಮಾತನಾಡಿದರು. ಪ್ರಾಚಾರ್ಯ ಫಾಲ್ಗುಣ ಗೌಡ, ಉಪನ್ಯಾಸಕರಾದ ರಮಾನಂದ ನಾಯಕ, ಉಲ್ಲಾಸ ಹುದ್ದಾರ, ಶ್ರೀನಿವಾಸ ಯು.ಕೆ, ರಮೇಶ್ ಗೌಡ ಎಂ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯೆ ಭಾಗೀರಥಿ ಹೆಗಡೆಕಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT